

ಚಿಕ್ಕಬಳ್ಳಾಪುರ: ತೀವ್ರ ಪೈಪೋಟಿಯ ಇಲ್ಲಿನ ವಕೀಲರ ಸಂಘಕ್ಕೆ ಪದಾಧಿಕಾರಿಗಳ ಆಯ್ಕೆಯಲ್ಲಿ ಗದ್ದಲ, ಮತಪತ್ರಗಳ ಕೈ ತಪ್ಪಿ ಹೋಗಿರುವ ಹಿನ್ನೆಲೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಮರು ಚುನಾವಣೆ ನಡೆಸುವಂತಾಗಿದೆ.
ಕಳೆದ ನ.28 ರಂದು ವಕೀಲರ ಭವನದಲ್ಲಿ ಮತದಾನ ನಡೆಯಿತು. ಇದರ ನಡುವೆ ತೀವ್ರ ಪೈಪೋಟಿಯಲ್ಲಿ ಉಪಾಧ್ಯಕ್ಷ, ಕಾರ್ಯದರ್ಶಿ, ಜಂಟಿ ಕಾರ್ಯದರ್ಶಿ, ಖಜಾಂಚಿ ಮತ್ತು ಸಮಿತಿ ನಿರ್ದೇಶರಕ ಆಯ್ಕೆಯಾಗಿ, ಅಧ್ಯಕ್ಷ ಸ್ಥಾನಕ್ಕೆ ಮತ ಎಣಿಕೆ ಪ್ರಕ್ರಿಯೆಯಲ್ಲಿ ಎರಡು ಮತಗಳು ಇಲ್ಲದಿರುವುದು ಗೊತ್ತಾಗಿದೆ. ಇದರಿಂದ ತಡರಾತ್ರಿ ಪರಸ್ಪರ ಗಲಾಟೆಯಾಗಿದ್ದು ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಲು ಮಧ್ಯೆ ಪ್ರವೇಶಿಸಬೇಕಾಯಿತು. ಕೊನೆಗೆ ಅಧ್ಯಕ್ಷ ಸ್ಥಾನಕ್ಕೆ ಡಿ.3 ರಂದು ಮತದಾನ ಪ್ರಕ್ರಿಯೆ ಕೈಗೊಳ್ಳಲು ನಿರ್ಧರಿಸಲಾಯಿತು. ಇದರ ನಡುವೆ ಕೆಲವರು ಹೈಕೋರ್ಟಿನ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.
*ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ
ಅಧ್ಯಕ್ಷ ಸ್ಥಾನಕ್ಕೆ ಕೆ.ಎಂ.ಗೋವಿಂದರೆಡ್ಡಿ (97 ಮತ), ಅಭಿಲಾಷ್ (107 ಮತ) ಮತ್ತು ಕೆ.ಎಚ್.ತಮ್ಮೇಗೌಡ (109 ಮತ), ಆರ್.ಮಟಮಪ್ಪ (89) ಸ್ಪರ್ಧಿಸಿದ್ದು ತೀವ್ರ ಪೈಪೋಟಿ ಉಂಟಾಗಿತ್ತು. ಗೆಲುವಿನ ಅಂತರ ಸಮೀಪದಲ್ಲಿರುವ ಸಂದರ್ಭದಲ್ಲಿ ಮತಗಳ ಏರುಪೇರು ಗಲಾಟೆಗೆ ಕಾರಣವಾಯಿತು. ಚಲಾವಣೆಯಾದ 4 ಮತಗಳು ನಾಪತ್ತೆಯಾಗಿವೆ.
*ಪದಾಧಿಕಾರಿಗಳ ಆಯ್ಕೆ
ಉಪಾಧ್ಯಕ್ಷರಾಗಿ ಎಚ್.ಮುನಿರಾಜು, ಪ್ರಧಾನ ಕಾರ್ಯದರ್ಶಿ ಟಿ.ಎಂ.ವೆಂಕಟೇಶ್, ಜಂಟಿ ಕಾರ್ಯದರ್ಶಿಯಾಗಿ ಎನ್.ಚಂದ್ರಶೇಖರ್, ಖಜಾಂಚಿಯಾಗಿ ಆಯೂಬ್ ಖಾನ್,
ಕಾರ್ಯಕಾರಿ ಸಮಿತಿ ಸದಸ್ಯ ಜಿ.ಅಶ್ವತ್ಥ ನಾರಾಯಣಸ್ವಾಮಿ, ರಾವೇಂದ್ರ, ಎಸ್.ಮುನಿರಾಜು, ಪ್ರವಿಣ್, ನರಸಿಂಹಮೂರ್ತಿ, ವೈ.ಎನ್.ಶ್ರೀನಿವಾಸ್ ಆಯ್ಕೆಯಾಗಿದ್ದಾರೆ.