

ಕೆ.ಆರ್.ನಗರ: ತಾಲೂಕಿನ ಬಸವರಾಜಪುರ ಗ್ರಾಮದ ಶಾರದಮ್ಮ(70) ಅವರು ತಾಲೂಕಿನ ಡೋರ‌್ನಹಳ್ಳಿ ಜಾತ್ರೆಗೆ ಹೋದವರು ಕಾಣೆಯಾಗಿದ್ದಾರೆ. ಜೂನ್ 13ರಂದು ತಾಲೂಕಿನ ಡೋರನಹಳ್ಳಿ ಗ್ರಾಮದಲ್ಲಿ ನಡೆದ ಜಾತ್ರೆಗೆ ನಮ್ಮ ತಾಯಿ ಶಾರದಮ್ಮ ಹೋಗಿದ್ದು ವಾಪಸ್ ಮನೆಗೆ ಬಂದಿಲ್ಲ ಎಂದು ಪುತ್ರ ಚೆಲುವಯ್ಯ ಕೆ.ಆರ್.ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. 5 ಅಡಿ ಎತ್ತರ, ಸಾಧಾರಣ ಮೈ ಕಟ್ಟು, ದುಂಡು ಮುಖ, ಎಣ್ಣೆಗೆಂಪು ಮೈ ಬಣ್ಣ, ಬಿಳಿ ತಲೆ ಕೂದಲು, ಕನ್ನಡ ಮಾತನಾಡುತ್ತಾರೆ. ಸುಳಿವು ಸಿಕ್ಕಲ್ಲಿ ಕೆ.ಆರ್ ನಗರ ಪೊಲೀಸ್ ಠಾಣೆ ಅಥವಾ ಜಿಲ್ಲಾ ಪೊಲೀಸ್ ಕಂಟ್ರೋಲ್ ರೂಂಗೆ ಮಾಹಿತಿ ನೀಡಬಹುದು.