

ಇಂಡಿ: ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಸುಧಾರಣೆಗಾಗಿ ತಾಲೂಕಿನಲ್ಲಿ ಮಿಸ್ಡ್ ಕಾಲ್ ಆಂದೋಲನ ಮತ್ತು ಶಿಕ್ಷಕರ ಬೀಟ್ ವ್ಯವಸ್ಥೆ ಆರಂಭಿಸಲಾಗಿದೆ ಎಂದು ನೋಡಲ್ ಅಧಿಕಾರಿ ಎ.ಓ. ಹೂಗಾರ ಹೇಳಿದರು.
ತಾಲೂಕಿನ ನಾದ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕರಿಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಲಿತಾಂಶ ಹೆಚ್ಚಿಸುವ ಕುರಿತು ನಡೆದ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎಸ್. ಅಲಗೂರ ಮಾತನಾಡಿ, ವಿದ್ಯಾರ್ಥಿಗಳ ಮನೋಸ್ಥೈರ್ಯ ಹೆಚ್ಚಿಸಿ ಸಾಮಾನ್ಯ ವಿದ್ಯಾರ್ಥಿಯೂ ಸುಲಭವಾಗಿ ಪರೀಕ್ಷೆ ಎದುರಿಸಲು ತರಬೇತಿ ನೀಡಲಾಗುತ್ತಿದೆ ಎಂದರು.
ನಾದ ಪ್ರೌಢಶಾಲೆ ಮುಖ್ಯಶಿಕ್ಷಕ ಚಿದಂಬರ ಬಂಡಗರ ಮಾತನಾಡಿ, ಪೋಷಕರು ಮತ್ತು ಹಳ್ಳಿಗಳಲ್ಲಿ ಇದರ ಬಗ್ಗೆ ತಿಳಿವಳಿಕೆ ಮೂಡಿಸುವ ಕೆಲಸ ಮಾಡಲಾಗುತ್ತಿದೆ. ಬಿಲೋ ಎವರೇಜ್ ವಿದ್ಯಾರ್ಥಿಗಳಿಗೆ ಪಾಸಿಂಗ್ ಪ್ಯಾಕೇಜ್ ಸಿದ್ಧಪಡಿಸಲಾಗುತ್ತಿದ್ದು, ಶಾಲೆಯ ಮುಖ್ಯಶಿಕ್ಷಕರು ವಿದ್ಯಾರ್ಥಿಗಳ ಪೋಷಕರಿಗೆ ಬೆಳಗ್ಗೆ 5ಗಂಟೆಗೆ ಸಂಜೆ 8 ಗಂಟೆಗೆ ಮೊಬೈಲ್ ಮೂಲಕ ವಿದ್ಯಾರ್ಥಿ ಅಭ್ಯಾಸದ ಬಗ್ಗೆ ಗಮನ ನೀಡಲಾಗುತ್ತಿದೆ ಎಂದರು.
ವಿಜ್ಞಾನ ಶಿಕ್ಷಕಿ ಶಶಿಕಲಾ ಬಡಿಗೇರ, ಅಂಜನೇಯಸ್ವಾಮಿ, ಸಂಗನಗೌಡ ಹಚಡದ, ಅಣ್ಣಾರಾಯ ಗುಗದಡ್ಡಿ, ರಾಮಚಂದ್ರ ಬಿರಾದಾರ, ರೇಖಾ ನಾಗಠಾಣ, ಅನಿತಾ ಅರಳಗುಂಡಗಿ ಮತ್ತಿತರಿದ್ದರು.