ಮಿಸ್ ಯು ಚಿನ್ನ ಸಂದೇಶ ಕಳುಹಿಸಿ, ಪ್ರಿಯತಮೆ ವೇಲ್ ನಿಂದಲೇ ನೇಣು ಬಿಗಿದುಕೊಂಡು ಮೃತಪಟ್ಟ ಪ್ರಿಯಕರ

IMG_20251010_230219.jpg
Published on

ಚಿಕ್ಕಬಳ್ಳಾಪುರ: ತಾಲೂಕಿನ ಬಾಲಕುಂಟಹಳ್ಳಿಯಲ್ಲಿ ಪ್ರಿಯತಮೆಯ ವೇಲ್‌ ನಿಂದಲೇ ನೇಣು ಬಿಗಿದುಕೊಂಡು ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಗ್ರಾಮದ ಚಿರುತ್ ಕುಮಾರ್ (೧೮). ನೇಣು ಹಾಕಿಕೊಳ್ಳುವುದರ ಮೊದಲು ʻಮಿಸ್ ಯು ಚಿನ್ನʼ ಎಂಬ ಬರಹವನ್ನೊಳಗೊಂಡ ಪ್ರಿಯತಮೆಯೊಂದಿಗಿನ ಪೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದು ಸಾವಿಗೆ ಪ್ರೇಮ ವೈಫಲ್ಯವೇ ಪ್ರಮುಖ ಕಾರಣ ಎಂಬುದು ಮೇಲ್ನೋಟಕ್ಕೆ ತಿಳಿದು ಬಂದಿದೆ.
ಎಸ್ಸೆಸ್ಸೆಲ್ಸಿಯಲ್ಲಿ ಅನುತ್ತೀರ್ಣಗೊಂಡ ಚಿರುತ್ ಜಮೀನಿನಲ್ಲಿ ಕೃಷಿ ಕೆಲಸ ಕೈಗೊಳ್ಳುತ್ತಿದ್ದ. ಶುಕ್ರವಾರ
ಇದ್ದಕ್ಕಿದ್ದಂತೆ ಜಕ್ಕಲಮಡುಗು ಜಲಾಶಯದ ಬಳಿ ಜಮೀನು ಪಕ್ಕದಲ್ಲಿನ ಮರವೊಂದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆ ಪ್ರಕರಣ ದಾಖಲಾಗಿದೆ.
ಇನ್ನು ಪ್ರಿಯತಮೆ ಅಪ್ರಾಪ್ತ ಬಾಲಕಿಯಾಗಿದ್ದು ಪ್ರೀತಿ ಮದುವೆಯಾಗಲು ನಾನಾ ಅಡ್ಡಿ ಆತಂಕಗಳು ಎದುರಾಗಿದ್ದವು.
ಈ ಹಿಂದೆ ಎರಡು ಬಾರಿ ಸಾಮಾಜಿಕ ಜಾಲತಾಣಗಳಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಸಂದೇಶವನ್ನು ಹಾಕಿದ್ದ. ಆಗ ಆತ್ಮೀಯರು ಬುದ್ದಿ ಮಾತು ಹೇಳಿ ಮನವೊಲಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net