

ಭಟ್ಕಳ: ಬೆಂಗಳೂರಿನ ಪ್ರತಿಷ್ಠಿತ ಕಲಾ ನವೀನ್ ಫೀಲಂ ಅಕಾಡೆಮಿ ವತಿಯಿಂದ ಆಯೋಜಿಸಿದ್ದ ಮಿಸ್ ಗ್ರ್ಯಾಂಡ್ ಸೌತ್ ಇಂಡಿಯಾ 2024-25 ಫ್ಯಾಷನ್ ಷೋದಲ್ಲಿ ಪಟ್ಟಣದ ಸಂಜನಾ ನಾಯ್ಕ ಪ್ರಥಮ ಸ್ಥಾನ ಪಡೆದು ಚಾಂಪಿಯನ್ ಆಗಿ ಆಯ್ಕೆಯಾಗಿದ್ದಾರೆ.
ಬೆಂಗಳೂರಿನ ಚೌಡಯ್ಯ ಮೆಮೋರಿಯಲ್ ಸಭಾಂಗಣದಲ್ಲಿ ನಡೆದ ಸ್ಪರ್ಧೆಯಲ್ಲಿ ದೇಶದ ವಿವಿಧೆಡೆಯಿಂಂದ ಹಲವು ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಭಟ್ಕಳದ ಸಂಜನಾ ನಾಯ್ಕ ಎಲ್ಲರನ್ನೂ ಮೀರಿಸಿ ಮಿಸ್ ಸೌಥ್ ಗ್ರ್ಯಾಂಡ್ ಪದಕವನ್ನು ತನ್ನದಾಗಿಸಿಕೊಂಡು ಮಿಸ್ ಇಂಡಿಯಾ ಹಾಗೂ ಹೊರದೇಶಗಳಲ್ಲಿ ನಡೆಯುವ ಪ್ಯಾಶನ್ ಷೋ ಗಳಿಗೆ ಸ್ಪರ್ಧಿಸುವ ಅರ್ಹತೆ ಪಡೆದಿದ್ದಾಳೆ. ಈಕೆ ಬೆಂಗಳೂರು ಇನ್ಸ್ಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದಾಳೆ. ಭಟ್ಕಳದ ತಲಾಂದ ಗ್ರಾಮದ ಹೂವಿನಹಿತ್ಲು ಮನೆಯ ನಾರಾಯಣ ನಾಯ್ಕ ಹಾಗೂ ಸುನಿತಾ ದಂಪತಿಗಳ ಪುತ್ರಿಯಾಗಿದ್ದಾಳೆ.