ಚಿಹ್ನೆ ಕುರಿತು ತಪ್ಪು ಮಾಹಿತಿ: ಎಸ್‌ಯುಸಿಐ ದೂರು

03-05-Shiva-2
ಮಾದರಿ ಮತಪತ್ರದಲ್ಲಿ ಎಸ್‌ಯುಸಿಐ ಅಭ್ಯರ್ಥಿಯ ಚಿಹ್ನೆಯನ್ನು ತಪ್ಪಾಗಿ ಮುದ್ರಿಸಿ ಗೊಂದಲ ಮೂಡಿಸಿರುವ ಬಿಜೆಪಿ ಅಭ್ಯರ್ಥಿ ವಿರುದ್ಧ ಕ್ರಮಕೈಗೊಳ್ಳುವಂತೆ ಒತ್ತಾಯಿಸಿ ರಾಯಚೂರಿನ ಸಹಾಯಕ ಚುನಾವಣಾಕಾರಿ ಅಶೋಕ ದುಡಗುಂಟಿಗೆ ಎಸ್‌ಯುಸಿಐನಿಂದ ಶುಕ್ರವಾರ ದೂರು ಸಲ್ಲಿಸಲಾಯಿತು. ಪಕ್ಷದ ಪದಾಕಾರಿಗಳಾದ ಮಹೇಶ ಚಿಕಲಪರ್ವಿ, ಚನ್ನಬಸವ ಜಾನೇಕಲ್, ಅಣ್ಣಪ್ಪ, ಎನ್.ಎಸ್.ವೀರೇಶ, ಮಲ್ಲನಗೌಡ, ವಿನೋದ ಇದ್ದರು.
Published on

ರಾಯಚೂರು: ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ ತಮ್ಮ ಮಾದರಿ ಮತಪತ್ರದಲ್ಲಿ ಎಸ್‌ಯುಸಿಐ ಅಭ್ಯರ್ಥಿಯ ಚಿಹ್ನೆ ಕುರಿತು ತಪ್ಪು ಮಾಹಿತಿ ನೀಡಿದ್ದು, ಅವರ ವಿರುದ್ಧ ಕ್ರಮಕೈಗೊಳ್ಳುವಂತೆ ಎಸ್‌ಯುಸಿಐನಿಂದ ಶುಕ್ರವಾರ ದೂರು ಸಲ್ಲಿಸಲಾಗಿದೆ.
ಪಕ್ಷದ ನಿಯೋಗ ಸಹಾಯಕ ಚುನಾವಣಾಕಾರಿ ಅಶೋಕ ದುಡಗುಂಟಿಗೆ ಮನವಿ ಸಲ್ಲಿಸಿ, ಎಸ್‌ಯುಸಿಐ ಅಭ್ಯರ್ಥಿಗೆ ಮಡಿಕೆಯನ್ನು ಚಿಹ್ನೆಯಾಗಿ ನೀಡಲಾಗಿದೆ. ಆದರೆ ಬಿಜೆಪಿ ಅಭ್ಯರ್ಥಿ ತಮ್ಮ ಮಾದರಿ ಮತಪತ್ರದಲ್ಲಿ ಸುತ್ತಿಗೆ ಮತ್ತು ಕುಡುಗೋಲು ಎಂದು ಮುದ್ರಿಸಿ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡಿದ್ದಾರೆ ಎಂದು ದೂರಿದರು.
ಮಾದರಿ ಮತಪತ್ರದಿಂದ ಜನರು ಗೊಂದಲಕ್ಕಿಡಾಗುವಂತಾಗಿದ್ದು, ಮತಗಳು ಪೋಲಾಗಿ ಪಕ್ಷದ ಅಭ್ಯರ್ಥಿಗೆ ಇದರಿಂದ ಹಾನಿಯುಂಟಾಗಲಿದೆ. ಚುನಾವಣೆ ಮಾದರಿ ನೀತಿ ಸಂಹಿತೆ ಉಲ್ಲಂಸಿರುವ ಬಿಜೆಪಿ ಅಭ್ಯರ್ಥಿ ವಿರುದ್ದ ಕ್ರಮಕೈಗೊಳ್ಳಬೇಕು.
ಚುನಾವಣೆ ಗುರುತಿನ ಗೊಂದಲದ ಬಗ್ಗೆ ಮಾಧ್ಯಮದ ಮೂಲಕ ಸ್ಪಷ್ಟನೆ ನೀಡಬೇಕು. ಇಲ್ಲವಾದರಲ್ಲಿ ಮರು ಚುನಾವಣೆಗೆ ಚುನಾವಣಾಕಾರಿ ಆದೇಶ ಹೊರಡಿಸಬೇಕು ಎಂದು ದೂರಿನಲ್ಲಿ ಒತ್ತಾಯಿಸಲಾಗಿದೆ.
ನಿಯೋಗದಲ್ಲಿ ಪಕ್ಷದ ಪದಾಕಾರಿಗಳಾದ ಮಹೇಶ ಚಿಕಲಪರ್ವಿ, ಚನ್ನಬಸವ ಜಾನೇಕಲ್, ಅಣ್ಣಪ್ಪ, ಎನ್.ಎಸ್.ವೀರೇಶ, ಮಲ್ಲನಗೌಡ, ವಿನೋದ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net