

ಬೆಂಗಳೂರು: ರೈತಮುಖಂಡರು ನಡೆಸುತ್ತಿರುವ ಭಾರತ್ ಬಂದ್ ಅಂಗವಾಗಿ ಇಂದು ನಗರದಲ್ಲಿ ನಡೆಯುತ್ತಿದ್ದ ಪ್ರತಿಭಟನೆ ವೇಳೆ ಭಾರೀ ಎಡವಟ್ಟೊಂದು ಸಂಭವಿಸಿದೆ. ಉತ್ತರ ವಿಭಾಗದ ಡಿಸಿಪಿ ಧರ್ಮೇಂದ್ರ ಕುಮಾರ್ ಮೀನಾ ಅವರ ಕಾಲ ಮೇಲೆ ಕಾರು ಏರಿರುವ ಪ್ರಸಂಗ ನಡೆದಿದೆ.
ಗೊರಗುಂಟೆ ಪಾಳ್ಯದಲ್ಲಿ ಕರ್ತವ್ಯನಿರತರಾಗಿದ್ದ ಡಿಸಿಪಿ ಮೀನಾ ಅವರು ಪ್ರತಿಭಾಟನಾ ನಿರತರನ್ನು ತಡೆಯುವ ವೇಳೆ ಈ ಘಟನೆ ನಡೆದಿದೆ. ರಾಲಿಯಲ್ಲಿ ಹೋಗುತ್ತಿದ್ದ ಕಾರೊಂದು ದಿಢೀರನೇ ಅವರ ಕಾಲಿನ ಮೇಲೆ ಹರಿದಿದೆ. ಮೀನಾ ಅವರಿಗೆ ಸದ್ಯ, ಯಾವುದೇ ಗಂಭೀರ ಸಮಸ್ಯೆಯಾಗಿಲ್ಲ. ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.
ಕೂದಲೆಳೆಯ ಅಂತರದಲ್ಲಿ ಭಾರೀ ಅನಾಹುತ ತಪ್ಪಿದೆ. ಆರ್ಎಂಸಿ ಯಾರ್ಡ್ ಪೊಲೀಸರು ಕಾರು ಚಾಲಕನನ್ನು ವಶಕ್ಕೆ ಪಡೆದಿದ್ದಾರೆ.