ಅನಾಹುತಗಳು ನಡೆಯದಂತೆ ಎಚ್ಚರಿಕೆ ವಹಿಸಿ

jan 03 kottur 01
ಕೊಟ್ಟೂರಿನ ಕೆಂಗಳ ದುರುಗಮ್ಮ ಜಾತ್ರಾ ಮಹೋತ್ಸವದ ಪೂರ್ವಭಾವಿ ಸಭೆಯಲ್ಲಿ ಡಿವೈಎಸ್ಪಿ ಮಲ್ಲೇಶಪ್ಪ ಮಲ್ಲಾಪುರ, ಸಿಪಿಐ ಟಿ. ವೆಂಕಟಸ್ವಾಮಿ, ಪಿಎಸ್‌ಐ ಗೀತಾಂಜಲಿ ಶಿಂಧೆ ಮುಂತಾದವರಿದ್ದರು.
Published on

ಕೊಟ್ಟೂರು: ಕೆಂಗಳ ದುರುಗಮ್ಮದೇವಿ ಜಾತ್ರಾಮಹೋತ್ಸವ ಜ.16ರಿಂದ18ರವರೆಗೆ ಜರುಗಲಿದ್ದು, ಭಕ್ತರು ಕಾನೂನಿನ ಚೌಕಟ್ಟಿನಲ್ಲಿ ಶಾಂತಿಯಿಂದ ಧಾರ್ಮಿಕ ಕಾರ್ಯವನ್ನು ನಡೆಸಬೇಕೆಂದು ಡಿ.ವೈ.ಎಸ್ಪಿ.ಮಲ್ಲೇಶಪ್ಪ ಮಲ್ಲಾಪುರ ತಿಳಿಸಿದರು.

ಪಟ್ಟಣದ ದುರುಗಮ್ಮದೇವಿ ದೇವಸ್ಥಾನದಲ್ಲಿ ಜಾತ್ರಾಮಹೋತ್ಸವ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಹಮ್ಮಿಕೊಂಡಿದ್ದ ಪೂರ್ವಸಿದ್ದತಾ ಸಭೆಯಲ್ಲಿ ಮಂಗಳವಾರ ಮಾತನಾಡಿದರು.

ಶಾಂತಿಯಿಂದ ಧಾರ್ಮಿಕ ಕಾರ್ಯವನ್ನು ನಡೆಸಿ

ಸಿಪಿಐ ಟಿ.ವೆಂಕಟಸ್ವಾಮಿ ಮಾತನಾಡಿ, ಧಾರ್ಮಿಕ ಕಾರ್ಯಗಳಿಗೆ ಕೆಲ ಕಿಡಿಗೇಡಿಗಳು ಕಳಂಕ ತರುವ ಕೆಲಸ ಮಾಡುತ್ತಿದ್ದು, ಅಂತವರಿಂದ ಪ್ರಜ್ಞಾವಂತ ಯುವಕರು ಎಚ್ಚರಿಕೆಯಿಂದ ಇದ್ದು ಯಾವುದೇ ಅನಾಹುತಗಳು ನಡೆಯದಂತೆ ನೋಡಿಕೊಳ್ಳಬೇಕೆಂದರು.

ಪಿ.ಎಸ್.ಐ. ಗೀತಾಂಜಲಿ ಶಿಂಧೆ, ಪಪಂ ಮುಖ್ಯಾಧಿಕಾರಿ ಎ.ನಸರುಲ್ಲಾ, ಉಪ ತಹಸೀಲ್ದಾರ್ ಅನ್ನದಾನೇಶ, ಜೆಸ್ಕಾಂ ಇಲಾಖೆ ವೆಂಕಟೇಶ, ವಾಲ್ಮೀಕಿ ಸಮುದಾಯದ ಮುಖಂಡರಾದ ಪಕ್ಕೀರಪ್ಪ, ಕೆಂಚಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net