ಕಾಂಗ್ರೆಸ್ ಸರ್ಕಾರದಲ್ಲಿ ಹೆಚ್ಚುತ್ತಿವೆ ದುಷ್ಕೃತ್ಯಗಳು

20koppa01 (H.K. Dinesh Hosur)
ಹೆಚ್.ಕೆ ದಿನೇಶ್ ಹೊಸೂರು
Published on

ಕೊಪ್ಪ : ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಮತಾಂದ ಶಕ್ತಿಗಳಿಂದ ದುಷ್ಕೃತ್ಯಗಳು ಹೆಚ್ಚಾಗುತ್ತಿದ್ದು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎಂದು ಬಿಜೆಪಿ ಮಂಡಲ ಅಧ್ಯಕ್ಷ ಹೆಚ್.ಕೆ ದಿನೇಶ್ ಹೊಸೂರು ಹೇಳಿದರು.
ಲವ್‌ಜಿಹಾದ್ ಕಾರಣದಿಂದ ಕಾಂಗ್ರೆಸ್ ಕಾರ್ಪೋರೇಟರ್ ಮಗಳ ಹತ್ಯೆಯಾಗಿದೆ. ಜೈ ಶ್ರೀರಾಮ್ ಘೋಷಣೆ ಹಾಕಿದಾಗ ಭಯಪಡಿಸುವ ಕೆಲಸ ನಡೆಯುತ್ತಿದೆ. ಅಂಗಡಿ, ಹೋಟೆಲ್‌ನಲ್ಲಿ ಹನುಮಾನ್ ಚಾಲಿಸ್ ಹಾಕಿದರೆ, ಮೋದಿ ಹಾಡು ಬರೆದರೆ ಗಲಾಟೆಗಳು ನಡೆಯುತ್ತದೆ. ರಾಜ್ಯದಲ್ಲಿ ಇದೇ ರೀತಿ ನಿರಂತರ ಗಲಾಬೆಗಳು ನಡೆಯುತ್ತಿದ್ದರೂ ಸರ್ಕಾರ ಮೌನಕ್ಕೆ ಜಾರಿದೆ ಎಂದು ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಬಿಜೆಪಿ ಅಭ್ಯರ್ಥಿ ಕೋಟ ಶ್ರೀ ನಿವಾಸ್ ಪೂಜಾರಿ ಹೆಚ್ಚು ಮತಗಳಿಂದ ಗೆಲುವು ಸಾಧಿಸುತ್ತಾರೆ. ಮೋದಿ ಪರವಾದ ಅಲೆ ಇದೆ ಎಂಬ ಆಶಾಭಾವನೆ ಇದೆ. ದೇಶದಲ್ಲಿ 140 ಕೋಟಿ ಜನಸಂಖ್ಯೆ, 60 ಕೋಟಿ ಕುಟುಂಬಗಳಿವೆ.ಒಂದು ಮನೆಗೆ 1ಲಕ್ಷ ಕೊಟ್ಟರೆ ಸುಮಾರು 60ಲಕ್ಷ ಕೋಟಿ ಹಣ ಬೇಕು. ನಮ್ಮ ದೇಶದ ಬಜೆಟ್ ಇರುವುದು ಸುಮಾರು 40 ಲಕ್ಷ ಕೋಟಿ, ಉಳಿದ 20ಲಕ್ಷ ಕೋಟಿ ಎಲ್ಲಿಂದ ತರುತ್ತಾರೆ ಎಂದು ಕಾಂಗ್ರೆಸ್‌ಸನ್ನು ಪ್ರಶ್ನಿಸಿದರು.
ರಾಷ್ಟ್ರದಲ್ಲಿ 201ಕ್ಷೇತ್ರದಲ್ಲಿ ಮಾತ್ರ ಕಾಂಗ್ರೆಸ್ ಸ್ಪರ್ಧಿಸಿದೆ. ಬಹುಮತಕ್ಕೆ 270 ಸ್ಥಾನ ಬೇಕು, ಕಾಂಗ್ರೆಸ್ ಸರಳ ಬಹುಮತಕ್ಕೆ ಬರಲು ಸಹ ಸಾಧ್ಯವಿಲ್ಲ. ಕಾಂಗ್ರೆಸ್‌ನವರು ಸುಳ್ಳುಗಳನ್ನು ಹೇಳಿ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ ಎಂದು ದೂರಿದರು.
ಶೃಂಗೇರಿ ವಿಧಾನಸಭಾ ಕ್ಷೇತ್ರ ಚುನಾವಣಾ ಸಂಚಾಲಕ ಎಸ್.ಎನ್.ರಾಮಸ್ವಾಮಿ ಮಾತನಾಡಿ, ಕಾಂಗ್ರೆಸ್ ಗೆಲ್ಲಲು ಶುಕ್ರವಾರ ಕೊಪ್ಪದ ಎಲ್ಲ ಮಸೀದಿಗಳಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಕಾಂಗ್ರೆಸ್‌ಗೆ ಮತ ಹಾಕುವಂತೆ ಪತ್ವ ಹೊರಡಿಸಿದ್ದಾರೆ ಇದು ದುರಂತ. ಎಲ್ಲರೊಂದಿಗೆ ಬೆರೆತು ಜೀವನ ನಡೆಸಬೇಕಾದವರನ್ನು ಮತಾಂಧ ಶಕ್ತಿಗಳು ಒಡೆಯುವ ಕೆಲಸ ಮಾಡುತ್ತಿವೆ. ಇದಕ್ಕೆ ಜನರು ತಕ್ಕ ಉತ್ತರ ಕೊಡಲಿದ್ದಾರೆ ಎಂದರು.
ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಜಿ.ಎಸ್.ಮಹಾಬಲ ರಾವ್, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಜೆ.ಪುಣ್ಯಪಾಲ್, ಜಿಲ್ಲಾ ಕಾರ್ಯದರ್ಶಿ ಅದ್ದಡ ಸತೀಶ್, ಮುಖಂಡರಾದ ಎಚ್.ಎಂ.ರವಿಕಾಂತ್, ಭಿ?ೇಜ ಭಟ್, ಅರುಣ್ ಶಿವಪುರ, ಎ.ದಿವಾಕರ್, ರೇವಂತ್ ಗೌಡ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net