ದ್ರಾಕ್ಷಿ ಇಳುವರಿ, ಹೊಟ್ಟೆ ಕಿಚ್ಚಿಗೆ ವಾಮಾಚಾರ ಮಾಡಿದ ಕಿಡಿಗೇಡಿಗಳು

2.jpg
Published on

ಚಿಕ್ಕಬಳ್ಳಾಪುರ: ತಾಲೂಕಿನ ನಕ್ಕನಹಳ್ಳಿಯಲ್ಲಿ ಕಟಾವಿಗೆ ಬಂದ ದ್ರಾಕ್ಷಿ ತೋಟಕ್ಕೆ ಕಿಡಿಗೇಡಿಗಳು ವಾಮಾಚಾರ ಮಾಡಿಸಿರುವ ಆರೋಪ ಕೇಳಿ ಬಂದಿದೆ.

ತೋಟದ ಸಮೀಪ ಕುಂಕುಮ, ಅರಿಶಿನ, ಮೊಟ್ಟೆಗಳನ್ನಿಟ್ಟು ಕ್ಷುದ್ರ ಪೂಜೆ ನೆರವೇರಿಸಲಾಗಿದೆ. ಇದರ ಮೂಲಕ ಬೆಳೆ ಹಾಳು ಮಾಡಲು ವಿರೋಧಿಗಳು ಯತ್ನಿಸಿದ್ದಾರೆ. ಇದರ ಬಗ್ಗೆ ತನಿಖೆ ಕೈಗೊಂಡು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ರೈತ ಪ್ರಭಾಕರ್ ಪೊಲೀಸರಿಗೆ ದೂರು ನೀಡಿದ್ದಾರೆ.

ಜಮೀನುಗಳ ಗಡಿ ವಿವಾದ, ಕೌಟುಂಬಿಕ ಕಲಹ ಸೇರಿದಂತೆ ನಾನಾ ಕಾರಣಗಳ ಹಿನ್ನೆಲೆಯಲ್ಲಿ ಪರಸ್ಪರ ನೆರೆಹೊರೆಯವರೊಂದಿಗೆ ಪ್ರತ್ಯಕ್ಷ ಪರೋಕ್ಷ$ವಾಗಿ ಸಂರ್ಷ ನಡೆಸುವ ಪ್ರಕರಣಗಳು ನಿರಂತರವಾಗಿ ವರದಿಯಾಗುತ್ತಿವೆ. ಕೃಷಿ ಜಮೀನಿನಲ್ಲಿ ಒಳ್ಳೆಯ ಇಳುವರಿ ಕೊಡುವ ಗಿಡಗಳನ್ನು ಕತ್ತರಿಸಿ ಹಾಕುವುದು, ಪಂಪ್ ಮೋಟಾರ್ಗಳನ್ನು ಹೊಡೆದು ಹಾಕುವುದು, ಕೋಳಿ ಹಾಗೂ ನಾಯಿಗಳಿಗೆ ವಿಷ ಉಣಿಸುವುದು ಸೇರಿದಂತೆ ನಾನಾ ಗಲಾಟೆಗಳು ನಡೆದಿದ್ದು ಪೊಲೀಸ್ ಠಾಣೆಯ ಮೆಟ್ಟಿಲೇರಿವೆ. ಇದರಿಂದ ಗ್ರಾಮದಲ್ಲಿ ಶಾಂತಿ ನೆಮ್ಮದಿಯು ಹಾಳಾಗುತ್ತಿದೆ. ಇದರ ನಡುವೆ ತೋಟದ ಬಳಿಕ ವಾಮಾಚಾರ ಮಾಡಿಸಿರುವ ಪ್ರಕರಣ ನಡೆದು ವ್ಯಾಪಕ ಚರ್ಚೆಗೆಗ್ರಾಸವಾಗಿದೆ. ಇಲ್ಲಿ ಒಳ್ಳೆಯ ಇಳುವರಿ ದ್ರಾಯು ಮಾರಾಟವಾಗಬಾರದು. ಎದುರಾಳಿಗೆ ಲಾಭ ಸಿಗಬಾರದು. ಏನಾದರೂ ಕೆಡುಕಾಗಲಿ ಎಂಬ ಭಾವನೆಯಲ್ಲಿ ಕ್ಷುದ್ರ ಪೂಜೆ ನಡೆದಿದೆ ಎನ್ನಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net