ಅಮರ್ ಜವಾನ್ ಜ್ಯೋತಿಗೆ ಹಾನಿ

Amar Jawan Jyoti
Published on

ಪುತ್ತೂರು: ಇಲ್ಲಿನ ಕಿಲ್ಲೇ ಮೈದಾನದ ಬಳಿ ಇರುವ ಅಮರ್ ಜವಾನ್ ಜ್ಯೋತಿಗೆ ಹಾನಿ ಆಗಿರುವ ಘಟನೆ ಮಂಗಳವಾರ ಬೆಳಗ್ಗೆ ಬೆಳಕಿಗೆ ಬಂದಿದೆ. ಈ ಬಗ್ಗೆ ನಗರ ಠಾಣೆಗೆ ದೂರು ನೀಡಲಾಗಿದೆ.

ಪುತ್ತೂರಿನ ನಟ್ಟೋಜ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ ಮುಂದಾಳತ್ವದ ಅಂಬಿಕಾ ವಿದ್ಯಾಲಯದ ಆಶ್ರಯದಲ್ಲಿ ಭಾರತೀಯ ವೀರ ಯೋಧರ ಸ್ಮರಣಾರ್ಥ 2017ರಲ್ಲಿ ಲೋಕಾಪರ್ಣೆಗೊಂಡ ಅಮರ್ ಜವಾನ್ ಜ್ಯೋತಿಗೆ ಕಿಡಿಗೇಡಿಗಳು ಹಾನಿ ಮಾಡಿದ್ದಾರೆ. ಸೋಮವಾರ ಬೆಳಿಗ್ಗೆ ಅಂಬಿಕಾ ವಿದ್ಯಾಸಂಸ್ಥೆ ಮ್ಯಾನೇಜರ್ ರವೀಂದ್ರ ಎಂಬುವರು ಸ್ಮಾರಕದ ಶುಚಿತ್ವಕ್ಕೆ ತೆರಳಿದಾಗ ಘಟನೆ ಬೆಳಕಿಗೆ ಬಂದಿದೆ. ಘಟನೆ ಕುರಿತು ಪುತ್ತೂರು ಠಾಣೆಯಲ್ಲಿ ದೂರು ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net