ಹಿಂದು ಮುಸ್ಲಿಂ ಸೌಹಾರ್ದ ಕೆಡಿಸಲು‌ ಮತ್ತೆ ಯತ್ನ, ಬಪ್ಪನಾಡು ದೇವಾಲಯಕ್ಕೆ ಕಿಡಿಗೇಡಿಗಳು ಮಾಡಿದ್ದೇನು ?

IMG-20220403-WA0019
Published on

ಮಂಗಳೂರು: ಹಲವು ವಿಚಾರಗಳಲ್ಲಿ ಹಿಂದು ಮುಸ್ಲಿಮ್ ಮಧ್ಯೆ ವಿವಾದಗಳು ಉದ್ಭವಿಸುತ್ತಿರುವ ಮಧ್ಯೆಯೇ ಆನ್‌ಲೈನ್‌ನಲ್ಲಿ ಇಂತಹ ಮತ್ತೊಂದು ಪ್ರಕರಣ ನಡೆದಿದೆ.

ಈ ಬಾರಿ ಹಿಂದು ಮುಸ್ಲಿಂ ಸೌಹಾರ್ದದ ತಾಣ ಬಪ್ಪನಾಡಿನ ಶ್ರೀ ದುರ್ಗಾಪರಮೇಶ್ವರಿ ದೇವಳವನ್ನು ಕಿಡಿಗೇಡಿಗಳು ತಮ್ಮ ಕೃತ್ಯಕ್ಕೆ ಬಳಸಿಕೊಂಡಿದ್ದಾರೆ.

ದೇವಸ್ಥಾನದ‌ ಹೆಸರನ್ನೇ ಗೂಗಲ್ ಮ್ಯಾಪ್‌ನಲ್ಲಿ ಬದಲಾಯಿಸಿ ಕುಕೃತ್ಯವೆಸಗಿದ್ದಾರೆ. ದುರ್ಗಾಪರಮೇಶ್ವರಿ ಎಂಬ ಹೆಸರಿನ ಮೊದಲು ಹಜರತ್ ಬಪ್ಪ ಬ್ಯಾರಿ ಪದಗಳನ್ನು ಸೇರಿಸಿರುವುದು ಬಯಲಾಗಿದೆ.

ನಕ್ಷೆಯಲ್ಲಿ ಹೆಸರನ್ನು ಬದಲಾಯಿಸಲು ಅವಕಾಶ ಇದ್ದು ಅದನ್ನೇ ಕಿಡಿಗೇಡಿಗಳು ದುರ್ಬಳಕೆ ಮಾಡಿದ್ದಾರೆ. ಹಲವು ದೇವಸ್ಥಾನಗಳಲ್ಲಿ ಜಾತ್ರೆ ವೇಳೆ ಇತರ ಧರ್ಮೀಯರಿಗೆ ಅವಕಾಶ ಇಲ್ಲ ಎಂದು ಬೋರ್ಡ್‌ಗಳು ಬಿದ್ದ ಬಳಿಕ ಈ ಪ್ರಕರಣ ನಡೆದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net