ಪ್ರಾಂಶುಪಾಲರ ಮೊಬೈಲ್ ಕದ್ದು 1.40 ಲಕ್ಷ ದೋಚಿದ ದುಷ್ಕರ್ಮಿಗಳು

Cyber Crime (1)
ಸಾಂದರ್ಭಿಕ ಚಿತ್ರ
Published on

ನರಗುಂದ: ಕಾಲೇಜ್‌ಗೆ ತೆರಳುತ್ತಿದ್ದ ಪ್ರಾಚಾರ್ಯರ ಮೊಬೈಲ್ ಕದ್ದು,ಯುಪಿಐ ಐಡಿ ಬಳಸಿ ಲಕ್ಷಾಂತರ ರೂಪಾಯಿ ಹಣ ವರ್ಗಾವಣೆ ಮಾಡಿಕೊಂಡ ಪ್ರಕರಣ ಪಟ್ಟಣದ ಬಸ್ ನಿಲ್ದಾಣದಲ್ಲಿ ನಡೆದಿದ್ದು, ಸೋಮವಾರ ಪ್ರಕರಣ ದಾಖಲಾಗಿದೆ.

ಪಟ್ಟಣದ ದಂಡಾಪುರ ಬಡಾವಣೆಯ ನಿವಾಸಿ, ತಾಲೂಕಿನ ಕೊಣ್ಣೂರ ಗ್ರಾಮದ ಕೆಇಎಸ್ ಕಾಲೇಜ್ ಪ್ರಾಚಾರ್ಯ ಶ್ರೀಕಾಂತ ಕೃಷ್ಣಾಜಿ ಜೋಶಿ ಅವರು ಜ.5ರಂದು ಬೆಳಗ್ಗೆ 9.30ಕ್ಕೆ ನರಗುಂದ ಬಸ್ ನಿಲ್ದಾಣದಿಂದ ಕೊಣ್ಣೂರಿಗೆ ತೆರಳುತ್ತಿದ್ದರು. ದುಷ್ಕರ್ಮಿಗಳು ಪ್ರಾಚಾರ್ಯರ ಜೇಬಿನಲ್ಲಿದ್ದ 20 ಸಾವಿರ ರೂ. ಮೌಲ್ಯದ ಮೊಬೈಲ್ ಕಂದಿದ್ದಾರೆ. ಆ ಮೊಬೈಲ್ ಫೋನ್‌ನಿಂದ ಒಟ್ಟು ಮೂರು ಹಂತಗಳಲ್ಲಿ ಒಟ್ಟು 75 ಸಾವಿರ ರೂ.ಗಳನ್ನು ಯುಪಿಐ ಐಡಿ ಮುಖಾಂತರ ವರ್ಗಾವಣೆ ಮಾಡಿಕೊಂಡಿದ್ದಾರೆ. ಜ.6ರಂದು 50 ಸಾವಿರ ರೂ., 15 ಸಾವಿರ ರೂ. ಸೇರಿದಂತೆ ಒಟ್ಟು 1.40 ಲಕ್ಷ ರೂ. ಹಣವನ್ನು ವರ್ಗಾಯಿಸಿಕೊಂಡು ವಂಚಿಸಿದ್ದಾರೆ.

ಹಣ ಕದ್ದಿರುವ ಆರೋಪಿಗಳನ್ನು ಪತ್ತೆ ಹಚ್ಚುವಂತೆ ಶ್ರೀಕಾಂತ ಜೋಶಿ ನರಗುಂದ ಪೊಲೀಸ್ ಠಾಣೆಗೆ ಸೋಮವಾರ ದೂರು ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net