

ದೊಡ್ಡಬಳ್ಳಾಪುರ : ನಗರ ಹಾಗೂ ಗ್ರಾಮಾಂತರ ಭಾಗದಲ್ಲಿ ಸರ ಕಳ್ಳರ ಹಾವಳಿ ಮತ್ತೆ ಮುಂದುವರಿದಿದೆ. ಮಾರಸಂದ್ರ ಅಪಾಟ್ಮೆಂರ್ಟ್ ಬಳಿ ದಂಪತಿ ಬೈಕ್ನಲ್ಲಿ ಹೋಗುವಾಗ ಹಿಂದಿನಿಂದ ಮತ್ತೊಂದು ಬೈಕ್ನಲ್ಲಿ ಬಂದ ದುಷ್ಕರ್ಮಿಗಳು ಮಹಿಳೆಯ ಕೊರಳಲ್ಲಿದ್ದ 45 ಗ್ರಾಂ. ತೂಕದ ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಿದ್ದಾರೆ.
ದೊಡ್ಡಬಳ್ಳಾಪುರ ನಗರದ ಕಲ್ಲುಪೇಟೆ ನಿವಾಸಿಗಳಾದ ರಮೇಶ್ ದಂಪತಿ ಅನಾರೋಗ್ಯದ ಹಿನ್ನೆಲೆಯಲ್ಲಿ ಮಂಗಳವಾರ ಮಧ್ಯಾಹ್ನ ರಾಜಾನುಕುಂಟೆ ಬಳಿ ಆಸ್ಪತ್ರೆಗೆ ಹೋಗಿ ವಾಪಾಸ್ ದೊಡ್ಡಬಳ್ಳಾಪುರದ ಕಡೆ ಬರುವಾಗ ನಂಬರ್ ಪ್ಲೇಟ್ ಇಲ್ಲದ ಬೈಕ್ನಲ್ಲಿ ಇಬ್ಬರು ದುಷ್ಕರ್ಮಿಗಳು ಮುಖಕ್ಕೆ ಮಾಸ್ಕ್ ಹಾಗೂ ಹೆಲ್ಮೆಟ್ ಧರಿಸಿಕೊಂಡು ಬಂದು ದಂಪತಿ ಬೈಕ್ ಹಿಂಬಾಲಿಸಿಕೊಂಡು ಬಂದು ಹಿಂಬದಿ ಕುಳಿತಿದ್ದ ಮಹಿಳೆಯ ಕೊರಳಲ್ಲಿದ್ದ ಚಿನ್ನದ ಸರ ಎಳೆದು ದೊಡ್ಡಬಳ್ಳಾಪುರದ ಕಡೆಗೆ ಪರಾರಿಯಾಗಿದ್ದಾರೆ. ರಾಜಾನುಕುಂಟೆ ಠಾಣೆಯಲ್ಲಿ ದೂರು ದಾಖಲಾಗಿದೆ.