ಸಾಲದ ಬಡ್ಡಿ ಮನ್ನಾ ಮಾಡಿ

Gurmatakal
Published on

ಗುರುಮಠಕಲ್: ಕೊವೀಡ್-19 ಹಿನ್ನೆಲೆಯಲ್ಲಿ ವಿವಿಧ ಫೈನಾನ್ಸ್ಗಳಿಂದ ಪಡೆದ ಹಣಕ್ಕೆ ಆರು ತಿಂಗಳ ಬಡ್ಡಿ ಕಂತು ಮನ್ನಾ ಮಾಡಬೇಕು ಎಂದು ವಿವಿಧ ಮಹಿಳಾ ಸಂಘಗಳು ಆಗ್ರಹಿಸಿದ್ದಾರೆ.

ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ, ಮೈಕ್ರೋ ಫೈನಾನ್ಸ್, ಚೈತನ್ಯ ಫೈನಾನ್ಸ್, ಸ್ಪಂದನಾ ಫೈನಾನ್ಸ್, ಗ್ರಾಮ ಶಕ್ತಿ ಫೈನಾನ್ಸ್, ಧರ್ಮಸ್ಥಳ ಫೈನಾನ್ಸ್ ಮೊದಲಾದವುಗಳಿಂದ ಪಡೆದ ಸಾಲದ ಇಎಂಐ ಕಟ್ಟಲು ಆಗದ ಕಾರಣ ಬಡ್ಡಿ ಮನ್ನಾ ಮಾಡಬೇಕು ಎಂದು ಸಂಘಗಳ ಪ್ರಮುಖರು ಒತ್ತಾಯಿಸಿದ್ದಾರೆ.

ಕರೊನಾ ಮಹಾಮಾರಿಗೆ ಜನರು ತತ್ತರಿಸಿದ್ದಾರೆ. ಉದ್ಯೋಗವಿಲ್ಲದೆ ಬದುಕಲು ತೊಂದರೆಯಾಗುತ್ತಿದೆ. ಇಂತಹ ಸಮಯದಲ್ಲಿ ಮಹಿಳಾ ಸಂಘಗಳಿಗೆ ಬಡ್ಡಿ ಕಟ್ಟಲು ಒತ್ತಾಯಿಸುತ್ತಿದ್ದರಿಂದ ಮಹಿಳೆಯರು ಆತ್ಮಹತ್ಯೆಗೆ ಗುರಿಯಾಗಬಹುದು. ಇದರಿಂದ ಸಕರ್ಾರ 6 ತಿಂಗಳ ಬಡ್ಡಿ ಮತ್ತು ಅಸಲು ಭರಿಸಿ ಮಹಿಳೆಯರಿಗೆ ಸ್ವಾವಲಂಬಿ ಬದುಕುವಂತೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ಸುಜಾತ, ಲಲಿತಮ್ಮ, ಭಾನುಪ್ರಿಯಾ, ಮಲ್ಲಮ್ಮ, ಯಂಕಟಮ್ಮ, ಮಾಳಮ್ಮ, ನರಸಮ್ಮ, ಚಂದ್ರಕಲಾ, ಶಂಕ್ರಮ್ಮ, ಅಂಭಿಕಾ, ಆಶಮ್ಮ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net