

ಸಿರಗುಪ್ಪ: ತಾಲೂಕಿನ ವಿವಿಧೆಡೆ ಮಂಗಳವಾರ ಮಧ್ಯಾಹ್ನದಿಂದ ಸಂಜೆವರೆಗೆ ಬಿರುಗಾಳಿ, ಗುಡುಗು, ಸಿಡಿಲು ಸಹಿತ ಭಾರಿ ಮಳೆ ಸುರಿಯಿತು.
ಇದನ್ನೂ ಓದಿ: ನೀರುಪಾಲಾಗಿದ್ದ ಮತೊಬ್ಬ ಯುವಕನ ಶವ ಪತ್ತೆ
ಪಟ್ಟಣದ ರಾಜ್ಯ ಹೆದ್ದಾರಿಯಲ್ಲಿ ತಗ್ಗುಗಳಲ್ಲಿ ಮಳೆ ನೀರು ನಿಂತಿದ್ದು, ವಾಹನ ಸವಾರರು ಪರದಾಡಿದರು. ಶಿವಶಕ್ತಿ ಭವನದ ಮುಂದಿನ ರಸ್ತೆ ಮೇಲೆ ಮಳೆ ನೀರು ಮತ್ತು ಚರಂಡಿ ತ್ಯಾಜ್ಯ ಹರಿದು ವಾಹನಗಳ ಸಂಚಾರಕ್ಕೆ ತೊಂದರೆ ಆಯಿತು. ಉಪ ನೋಂದಣಿ ಇಲಾಖೆ ಆವರಣದಲ್ಲಿ ಹಲವೆಡೆ ನೀರು ನಿಂತಿತ್ತು.
ಕೃಷಿ ಇಲಾಖೆ ಕಚೇರಿ ಆವರಣದಲ್ಲಿ ನೀರು ತುಂಬಿತ್ತು. ಹಚ್ಚೊಳ್ಳಿ ಹೋಬಳಿ ವ್ಯಾಪ್ತಿಯ ಗುಬ್ಬಿಹಾಳ್ ಗ್ರಾಮದ ಸುತ್ತಮುತ್ತಲಿನ ಕೃಷಿ ಜಮೀನಿನಲ್ಲಿ ಮಳೆ ನೀರಿನ ರಭಸಕ್ಕೆ ವಡ್ಡುಗಳು ಒಡೆದಿವೆ. ರಾವಿಹಾಳ ಗ್ರಾಮದ ಬಳಿಯ ಕೆಮ್ಮನಹಳ್ಳ ತುಂಬಿ ಹರಿದ ಪರಿಣಾಮ ಜಮೀನುಗಳಲ್ಲಿ ಮಳೆ ನೀರು ನಿಂತಿದೆ.