ವಿವಿಧ ಧ್ವಜಾರೋಹಣ ಕಾರ್ಯಕ್ರಮ

31ss1dhwajarohana
????????????????????????????????????
Published on

ಶನಿವಾರಸಂತೆ: ನಿಡ್ತ ಗ್ರಾಮದಲ್ಲಿ ಶುಕ್ರವಾರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ವಿವಿಧ ಧ್ವಜಾರೋಹಣ ನೆರವೇರಿಸಲಾಯಿತು.

ಸೋಮವಾರಪೇಟೆ ತಹಸೀಲ್ದಾರ್ ಗೋವಿಂದರಾಜ್ ರಾಷ್ಟ್ರಧ್ವಜ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಬಿ.ಎಸ್.ಲೋಕೇಶ್ ಸಾಗರ್ ಕಸಾಪ ಧ್ವಜ ಹಾಗೂ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಸುನೀಲ್ ನಾಡಧ್ವಜ ನೆರವೇರಿಸಿದರು.

ಬಿ.ಎಸ್.ಲೋಕೇಶ್ ಸಾಗರ್ ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿ ಕನ್ನಡಾಭಿಮಾನ ಬೆಳೆಸುವ ಉದ್ದೇಶದಿಂದ ಪ್ರಥಮ ಬಾರಿಗೆ ನಿಡ್ತ ಗ್ರಾಮದಲ್ಲಿ ಜಿಲ್ಲಾ ಮಟ್ಟದ ಸಾಹಿತ್ಯ ಸಮ್ಮೇಳನ ನಡೆಸಲಾಗುತ್ತಿದೆ. ಇದರಿಂದ ಮೂಲ ಸಮಸ್ಯೆಗಳು ನಿವಾರಣೆಯಾಗುತ್ತದೆ ಎಂದರು.

ದ್ವಾರಗಳ ಉದ್ಘಾಟನೆ: ವಿವಿಧ ದ್ವಾರಗಳನ್ನು ನಿಡ್ತ ಗ್ರಾಮ ಪಂಚಾಯಿತಿ ಸದಸ್ಯರು ಉದ್ಘಾಟಿಸಿದರು.

ಸ್ವಾತಂತ್ರ ಹೋರಾಟಗಾರ ದಿ.ಎನ್.ಕೃಷ್ಣಮೂರ್ತಿ ದ್ವಾರವನ್ನು ಎಲ್.ಎಚ್.ನಳಿನಿ, ಮುಳ್ಳೂರು ದಿ.ಅಶೋಕ್ ದ್ವಾರವನ್ನು ಸಾವಿತ್ರಮ್ಮ, ದಿ.ಎನ್.ಡಿ.ಗುಂಡಪ್ಪ ದ್ವಾರವನ್ನು ಹಾರಹೊಸೂರು ಹೂವಮ್ಮ, ದಿ.ವಿ.ಎನ್.ಪುಟ್ಟಪ್ಪ ಹಿತ್ತಲಕೇರಿ ದ್ವಾರವನ್ನು ವಿಜಯ್‌ಕುಮಾರ್, ದಿ.ಮಂಜಯ್ಯ ಮತ್ತು ಕೃಷ್ಣಯ್ಯ ಜಾಗೇನಹಳ್ಳಿ ದ್ವಾರವನ್ನು ಗಂಗಾಧರ್ ಹಾಗೂ ದಿ.ಮಂಜುನಾಥ್‌ಮೂರ್ತಿ ಮುಖ್ಯ ದ್ವಾರವನ್ನು ಬಿ.ಕೆ.ಸುಬ್ರಮಣಿ ಉದ್ಘಾಟಿಸಿದರು.

ದಿ.ಎನ್.ಸಿ.ಪುಟ್ಟಸ್ವಾಮಿ ಪುಸ್ತಕ, ವಸ್ತುಪ್ರರ್ದಶನ ಮತ್ತು ಮಾರಾಟ ಮಳಿಗೆಯನ್ನು ಜಿಪಂ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್ ಹಾಗೂ ಕೊಡಗು ಚಂದ್ರಿಕೆ ಸುದ್ದಿ ಮನೆಯನ್ನು ಗ್ರಾಪಂ ಉಪಾಧ್ಯಕ್ಷೆ ಕಾಳಮ್ಮ ಉದ್ಘಾಟಿಸಿದರು. ಗ್ರಾಮ ಪಂಚಾಯಿತಿ ಸದಸ್ಯರಾದ, ಬಿ.ಜೆ.ಅಶೋಕ್, ಎಂ.ಡಿ.ದಯಾನಂದ್, ನಟೇಶ್, ಮಂಜುಳಾ, ಪವಿತ್ರಾ ಚಂದ್ರ, ಅಶ್ವಥ್, ಪ್ರಮುಖ ಎಚ್.ಪಿ.ಮೋಹನ್ ಹಾಜರಿದ್ದರು.


ಸಮ್ಮೇಳಾನಾಧ್ಯಕ್ಷರ ಮೆರವಣಿಗೆ: ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಸಮ್ಮೇಳನಾಧ್ಯಕ್ಷ ನಾಗೇಶ್ ಕಾಲೂರು ಅವರನ್ನು ಮುಳ್ಳೂರು ಸರ್ಕಾರಿ ಶಾಲೆ ವತಿಯಿಂದ ತಯಾರಿಸಿದ ಕನ್ನಡ ತೇರಿನಲ್ಲಿ ವಿವಿಧ ಮಂಗಳವಾದ್ಯದೊಂದಿಗೆ ಮೆರವಣಿಗೆ ನಡೆಸಲಾಯಿತು.

ಮುಳ್ಳೂರು ವೃತ್ತದಲ್ಲಿ ಮೆರವಣಿಗೆಗೆ ಶನಿವಾರಸಂತೆ ಪೊಲೀಸ್ ಠಾಣಾಧಿಕಾರಿ ಕೃಷ್ಣ ನಾಯಕ ಚಾಲನೆ ನೀಡಿದರು. ಮುಳ್ಳೂರು ವೃತ್ತದಿಂದ ಶನಿವಾರಸಂತೆ ಮುಖ್ಯರಸ್ತೆ, ಜಾಗೇನಹಳ್ಳಿ, ಹಿತ್ತಲಕೇರಿ ಮಾರ್ಗವಾಗಿ ವೇದಿಕೆ ಕಾರ್ಯಕ್ರಮದವರೆಗೆ ಮೆರವಣಿಗೆ ನಡೆಸಲಾಯಿತು. ಈ ವೇಳೆ ವಿವಿಧ ಕಲಾತಂಡ, ಸ್ತಬ್ಧಚಿತ್ರ, ವೀರಗಾಸೆ ಕುಣಿತ ಹಾಗೂ 101ಕ್ಕೂ ಹೆಚ್ಚು ಮಹಿಳೆಯರು ಕಳಸ ಹೊತ್ತು ಸಾಗಿದರು.
ಮೆರವಣಿಗೆಯಲ್ಲಿ 200 ಮೀಟರ್ ಉದ್ದದ ಕಸಾಪ ಧ್ವಜ ಹಾಗೂ ವಿದ್ಯಾರ್ಥಿಗಳು ಕನ್ನಡದ ಹೆಸರಾಂತ ಕವಿಗಳು, ಸಾಧಕರು, ಭುವನೇಶ್ವರಿಯ ವೇಷತೊಟ್ಟು ಗಮನ ಸೆಳೆದರು. ಮೆರವಣಿಗೆಯಲ್ಲಿ ಭಾಗವಹಿಸಿದ್ದ ಜನರಿಗೆ ನಿಡ್ತ ಗ್ರಾಮದ ಬಿ.ಕೆ.ಸುಬ್ರಮಣಿ ಮಜ್ಜಿಗೆ ವಿತರಿಸಿದರು.

ತಾಪಂ ಸದಸ್ಯರಾದ ಬಿ.ಎಸ್.ಅನಂತ್‌ಕುಮಾರ್, ಲೀಲಾವತಿ ಮಹೇಶ್, ಗ್ರಾಪಂ ಸದಸ್ಯೆ ಯಶೋಧಾ ಮತ್ತಿತರರು ಹಾಜರಿದ್ದರು. ನಿಡ್ತ, ಮುಳ್ಳೂರು ಸರ್ಕಾರಿ ಶಾಲೆ, ವಿಘ್ನೇಶ್ವರ ಬಾಲಕಿಯಯ ವಿದ್ಯಾಸಂಸ್ಥೆ, ಶನಿವಾರಸಂತೆಯ ಪವಿತ್ರ ಹೃದಯ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳು, ಸ್ತ್ರೀಶಕ್ತಿ ಸಂಘಗಳು, ಕನ್ನಡಪರ ಸಂಘಟನೆಗಳು ಭಾಗವಹಿಸಿದ್ದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net