

ವಿಜಯಪುರ: ಪರಿಶಿಷ್ಟರ ಹಣ ದುರ್ಬಳಕೆ ಮಾಡಿಕೊಂಡಿರುವ ರಾಜ್ಯ ಸರ್ಕಾರದ ವಿರುದ್ಧ ಫೆ. 27 ರಿಂದ ರಾಜ್ಯಾದ್ಯಂತ ಜನಾಂದೋಲನ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿಯ ಜನಾಂದೋಲನದ ಸಂಯೋಜಕ ರಾಮಣ್ಣ ಬಲ್ಲಹುಣ್ಸಿ ಹೇಳಿದರು.
ನಗರದ ಬಿಜೆಪಿ ಕಾರ್ಯಾಲಯದಲ್ಲಿ ಮಂಗಳವಾರ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯಾದ್ಯಂತ 14 ತಂಡಗಳಲ್ಲಿ ಫೆ.27 ರಿಂದ ಮಾ. 1ರ ವರೆಗೆ ದಲಿತ ದ್ರೋಹಿ ಸರ್ಕಾರದ ವಿರುದ್ಧ ಜನಾಂದೋಲ ಹಮ್ಮಿಕೊಳ್ಳಲಾಗಿದ್ದು, ಸರ್ವರೂ ಪಾಲ್ಗೊಳ್ಳಬೇಕೆಂದರು.
ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಆಶೋಕ, ಮಾಜಿ ಸಂಸದ ಡಾ. ಉಮೇಶ ಜಾಧವ, ಅಮರೇಶ್ವರ ನಾಯಕ, ಬಳ್ಳಾರಿ ಹನುಮಂತಪ್ಪ, ಗುರುರಾಜ ಗಂಟಹೊಳೆ, ರಾಜು ನಾಯ್ಕರ, ಪ್ರತಾಪ್‌ಗೌಡ ಪಾಟೀಲ, ಅರುಣ ಶಹಾಪುರ ನೇತೃತ್ವ 14 ತಂಡಗಳನ್ನು ರಚಿಸಲಾಗಿದೆ. ತಾವು ಹಾಗೂ ಪಿ. ಓಂಕಾರ ತುಮಕೂರ ಸಂಯೋಕರಾಗಿ ಕಾರ್ಯ ನಿರ್ವಹಿಸುತ್ತಿರುವುದಾಗಿ ತಿಳಿಸಿದರು.
ರಾಜ್ಯಾದ್ಯಂತ ಈ ತಂಡಗಳು ಪ್ರವಾಸ ಮಾಡಲಿವೆ. ವಿಜಯಪುರ ಜಿಲ್ಲೆಯಲ್ಲಿ ಬೃಹತ್ತ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಜಿಲ್ಲಾಡಳಿತ ಭವನಕ್ಕೆ ಮುತ್ತಿಗೆ ಹಾಕಲಾಗುವುದೆಂದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜು ನಾಯಕ ಹಾಗೂ ಚಿದಾನಂದ ಚಲವಾದಿ ಮಾತನಾಡಿದರು.
ಮುಖಂಡರಾದ ಸಂಜೀವ ಐಹೊಳೆ, ಮುಳುಗೋಡ ಪಾಟೀಲ, ಮಹೇಂದ್ರ ನಾಯಕ್, ರವಿ ವಗ್ಗೆ, ಶ್ರೀನಿವಾಸ ಕಂದಗಲ್ಲ, ಗುರು ತಳವಾರ, ಭರತ ಕೋಳಿ, ಭೀಮಾಶಂಕರ ಹದನೂರ, ಮಲ್ಲಿಕಾರ್ಜುನ ಕಿವುಡೆ, ವಿಜಯ್ ಜೋಶಿ, ಶಿಲ್ಪಾ ಕುದುರೆಗೊಂಡ, ಪ್ರವೀಣ ನಾಟಿಕಾರ ಮತ್ತಿತರರಿದ್ದರು.