ಪದ್ಮಭೂಷಣ ಜನರಲ್ ಕೆ.ಎಸ್. ತಿಮ್ಮಯ್ಯ ಅವರ ಏಕೈಕ ಪುತ್ರಿ ಮಿರೇಲ್ (೮೬) ಬೆಂಗಳೂರಿನಲ್ಲಿ ಶನಿವಾರ ನಿಧನರಾಗಿದ್ದಾರೆ. ಇವರು ನಿವೃತ್ತ ಸೇನಾಧಿಕಾರಿ ಮೇಜರ್ ಕೊಂಗೆಟ್ಟಿರ ಚಂಗಪ್ಪ ಅವರ ಪತ್ನಿ. ಮಿರೇಲ್ ತಮ್ಮ ಪತಿಯೊಂದಿಗೆ ಹಲವು ವರ್ಷದಿಂದ ಬೆಂಗಳೂರಿನಲ್ಲಿ ನೆಲೆಸಿದ್ದರು. ಮೃತರ ಅಂತ್ಯಕ್ರಿಯೆ ಬೆಂಗಳೂರಿನಲ್ಲಿ ನೆರವೇರಿತು.