

ಬೆಳಗಾವಿ: ಕಿಯಾ ಇಂಡಿಯಾ ಕಂಪನಿ ಭಾರತದಲ್ಲಿ ಮೊದಲು ತಯಾರಿಸಿದ ವಿದ್ಯುತ್ ಚಾಲಿತ ದಿ ಕ್ಯಾರೆನ್ಸ್ ಕ್ಲ್ಯಾವಿಸ್ ಕಾರು ಬೆಳಗಾವಿ ಮಾರುಕಟ್ಟೆ ಪ್ರವೇಶಿಸಿದ್ದು, ಇಲ್ಲಿನ ಮಿರಾಕ್ಯುಲಮ್ ಕಿಯಾ ಡೀಲರ್ಶಿಪ್ನಲ್ಲಿ ಬಿಡುಗಡೆಗೊಳಿಸಲಾಗಿದೆ.
ಕಾರು ಮಾರುಕಟ್ಟೆಗೆ ಬಿಡುಗಡೆಗೊಳಿಸುವ ಸಂದರ್ಭದಲ್ಲಿ ಕೆನರಾ ಬ್ಯಾಂಕ್ ವಿಭಾಗೀಯ ವ್ಯವಸ್ಥಾಪಕ ಕೆ.ಎಸ್.ಎಸ್. ಭಗವಾನ್, ಕೆನರಾ ಬ್ಯಾಂಕ್ ರಿಟೇಲ್ ಆಸ್ತಿ ಹಬ್ ಮುಖ್ಯಸ್ಥ ನೀರಜ್ ತಿವಾರಿ, ಡೀಲರ್ಶಿಪ್ ಮಾಲೀಕ ಅಭಯ ಗೋವಿಂದ ಜೋಶಿ ಮತ್ತು ಮಾರಾಟ ವಿಭಾಗದ ಮುಖ್ಯಸ್ಥ ಸತೀಶ ಪ್ರಭು ಹಾಗೂ ಇತರರಿದ್ದರು.
ಈ ಕಾರು ತಡೆರಹಿತ ನಿಯಂತ್ರಣಕ್ಕಾಗಿ ಐ&ಪೆಡಲ್ ರೀಜೆನ್ ತಂತ್ರಾನ, ಪ್ರಯಾಣಕ್ಕೆ ಶಕ್ತಿ ತುಂಬಲು ವಿ2ಎಲ್ ಮತ್ತು ವಿಸತ 51.4 ಕಿಲೋ ವ್ಯಾಟ್ ಬ್ಯಾಟರಿಯೊಂದಿಗೆ ವಿನ್ಯಾಸಗೊಳಿಸಲಾಗಿದೆ. 3 ಸಾಲಿನ ಸೌಕರ್ಯ, ಸ್ಮಾರ್ಟ್ ಸುರತೆ ಮತ್ತು ಅತ್ಯಾಧುನಿಕ ವೈಶಿಷ್ಟ್ಯ ಹೊಂದಿದೆ.
ಸುರತೆಗಾಗಿ ಕ್ಯಾರೆನ್ಸ್ ಕ್ಲಾ$್ಯವಿಸ್ ಇವಿ ಎಡಿಎಎಸ್ ಲೆವೆಲ್ 2ಯೊಂದಿಗೆ 20 ಸ್ವಾಯತ್ತ ಮತ್ತು 18 ದೃಢವಾದ ಸುರತಾ ಮಾನದಂಡ ವೈಶಿಷ್ಟ$್ಯಗಳೊಂದಿಗೆ ಬರುತ್ತದೆ. ಈ ಕಾರು ಐವರಿ ಸಿಲ್ವರ್ ಮ್ಯಾಟ್, ಪ್ಯೂಟರ್ ಆಲಿವ್, ಇಂಪೀರಿಯಲ್ ಬ್ಲೂ, ಅರೋರಾ ಬ್ಲಾ$್ಯಕ್ ಪರ್ಲ್, ಗ್ಲೇಸಿಯರ್ ವೈಟ್ ಪರ್ಲ್ ಮತ್ತು ಗ್ರಾವಿಟಿ ಗ್ರೇನಂಥ 6 ಬಣ್ಣಗಳಲ್ಲಿ ಲಭ್ಯವಿದೆ.