

ಬೆಳಗಾವಿ: ಕೈವಾರ ತಾತಯ್ಯನವರು ಕನ್ನಡ, ತೆಲುಗು, ಸಂಸ್ಕೃತ ಹಾಗೂ ವಿವಿಧ ಭಾಷೆಗಳನ್ನು ಬಲ್ಲವರಾಗಿದ್ದರು. ಹರಿ ನಮೋ ನಾರಾಯಣಾಯ ಎಂದುಕೊಂಡು ತಮ್ಮ ಜೀವಿತಾವಯಲ್ಲಿ ಹಲವು ಪವಾಡ ಮಾಡಿದ್ದರು ಎಂದು ಬೆಳಗಾವಿ ಬಲಿಜ ಸೇವಾ ಸಂಘದ ಜಿಲ್ಲಾಧ್ಯಕ್ಷ ಮಾರುತಿ ತೇಲಂಗ ತಿಳಿಸಿದರು.
ನಗರದ ಕುಮಾರ ಗಂಧರ್ವ ಕಲಾ ಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಸಂಯುಕ್ತ ಆಶ್ರಯದಲ್ಲಿ ಭಾನುವಾರ ಆಯೋಜಿಸಿದ್ದ ಶ್ರೀ ಯೋಗಿ ನಾರೇಯಣ ಯತೀಂದ್ರ (ಕೈವಾರ ತಾತಯ್ಯ) ಜಯಂತಿ ಉತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೇಶಕಿ ವಿದ್ಯಾವತಿ ಭಜಂತ್ರಿ, ಜಯಂತ ಗೊಂದಾವಳಿ, ಸತೀಶ ಗುಡಮೇಲ, ಗೋವಿಂದ ನಾಯ್ಡು, ಬಸವರಾಜ ಹೂಗಾರ, ಅಶ್ವಿನಿ ತೆಲಂಗ, ಸನತ ನಾಯ್ಡು, ಅನಂತಕುಮಾರ ಬ್ಯಾಕೂಡ ಇತರರಿದ್ದರು.