ಕೋಯಿಮ್ಸ್‌ನಲ್ಲಿ ಎಂಐಆರ್ ಸ್ಕ್ಯಾನಿಂಗ್

MIR scanning in coims
Published on

ಮಡಿಕೇರಿ:

ಜಿಲ್ಲೆಯ ಬಹುಬೇಡಿಕೆಯ ಎಂಆರ್‌ಐ ಸ್ಕಾ÷್ಯನಿಂಗ್ ಯಂತ್ರ ಅಳವಡಿಕೆ ಕಾರ್ಯ ಕೊಡಗು ವೈದ್ಯಕೀಯ ವಿದ್ಯಾಲಯದ ಭೋದಕ ಆಸ್ಪತ್ರೆಯಲ್ಲಿ ಬಹುತೇಕ ಪೂರ್ಣಗೊಂಡಿದೆ. ಎಲ್ಲ ಅಂದುಕೊAಡAತೆ ಆದರೆ ಇನ್ನು ಒಂದೂವರೆ ತಿಂಗಳಿನಲ್ಲಿ ಈ ಸೇವೆ ಸ್ಥಳೀಯವಾಗಿಯೇ ಸಾರ್ವಜನಿಕರಿಗೆ ಲಭ್ಯವಾಗಲಿದೆ. ಇದರಿಂದಾಗಿ ಜಿಲ್ಲೆಯ ಜನರು ದೂರದ ಊರುಗಳಿಗಾಗಿ ಅಲೆದಾಡುವುದು ತಪ್ಪಲಿದೆ.

ಮಡಿಕೇರಿಯಲ್ಲಿದ್ದ ಕೊಡಗು ಜಿಲ್ಲಾಸ್ಪತ್ರೆ ಹೆಸರಿಗಷ್ಟೇ ಜಿಲ್ಲಾಸ್ಪತ್ರೆ ಆಗಿದ್ದ ದಿನಗಳು ಇದ್ದವು. ಜಿಲ್ಲೆಗೆ ವೈದ್ಯಕೀಯ ಕಾಲೇಜು ಬಂದು ಈ ಆಸ್ಪತ್ರೆ ಭೋದಕ ಆಸ್ಪತ್ರೆ ಆದ ನಂತರ ಪರಿಸ್ಥಿತಿ ಸುಧಾರಿಸಬಹುದು ಎನ್ನುವ ನಿರೀಕ್ಷೆ ಇತ್ತು. ಆದರೆ ಅದು ಕೂಡ ಹುಸಿಯಾಗಿ ತಜ್ಞ ವೈದ್ಯರ ಸೇವೆ ಬೇಕೆಂದರೆ ದೂರದ ಮೈಸೂರು, ಮಂಗಳೂರು ಅಥವಾ ಬೆಂಗಳೂರಿಗೆ ತೆರಳಬೇಕಾದ ಸ್ಥಿತಿ ಈಗಲೂ ಇದೆ. ಎಂಆರ್‌ಐ ಸ್ಕಾö್ಯನಿಂಗ್ ಕತೆಯೂ ಇದೇ ರೀತಿ ಇತ್ತು.

ಮಡಿಕೇರಿ ಭೋದಕ ಆಸ್ಪತ್ರೆಯಲ್ಲಿ ಸಿಟಿ ಸ್ಕಾ÷್ಯನಿಂಗ್ ವ್ಯವಸ್ಥೆ ಇದೆಯಾದರೂ ನಿಖರ ಫಲಿತಾಂಶಕ್ಕೆ ಅಗತ್ಯವಾದ ಎಂಆರ್‌ಐ ಸ್ಕಾ÷್ಯನಿಂಗ್ ವ್ಯವಸ್ಥೆ ಇಲ್ಲಿ ಇರಲಿಲ್ಲ. ಇದಕ್ಕಾಗಿ ಪಕ್ಕದ ಸುಳ್ಯ, ಮಂಗಳೂರು ಅಥವಾ ಮೈಸೂರು, ಬೆಂಗಳೂರಿಗೆ ತೆರಳಬೇಕಾಗಿತ್ತುö. ಇದೀಗ ಮಡಿಕೇರಿ ಶಾಸಕ ಡಾ. ಮಂತರ್‌ಗೌಡ ಸರ್ಕಾರದೊಂದಿಗೆ ವ್ಯವಹರಿಸಿ ಜಿಲ್ಲೆಗೆ ಎಂಆರ್‌ಐ ಸ್ಕಾ÷್ಯನಿಂಗ್ ಯಂತ್ರ ಮಂಜೂರು ಮಾಡಿಸಿದ್ದಾರೆÀ. ಯಂತ್ರದ ಅಳವಡಿಕೆ ಕಾರ್ಯ ಬಹುತೇಕ ಪೂರ್ಣಗೊಂಡಿದೆ. ವಿದ್ಯುತ್ ಅಳವಡಿಕೆ ಮತ್ತು ಇತರ ತಾಂತ್ರಿಕ ಕೆಲಸಗಳಾಗಬೇಕಿದೆ. ಇನ್ನು ಒಂದೂವರೆ ತಿಂಗಳಿನಲ್ಲಿ ಕೋಯಿಮ್ಸ್ನಲ್ಲಿ ಎಂಆರ್‌ಐ ಸೇವೆ ಲಭ್ಯವಾಗಲಿದೆ.

ಎಂಆರ್‌ಐ (ಮ್ಯಾಗ್ನೆಟಿಕ್ ರೆಸೋನೆನ್ಸ್ ಇಮೇಜಿಂಗ್) ಯಂತ್ರ ಸಂಪೂರ್ಣ ಕಾಂತೀಯ ಶಕ್ತಿಯಿಂದ ಕಾರ್ಯನಿರ್ವಹಿಸುವುದರಿಂದ ಇದಕ್ಕೆ ದಿನದ 24 ಗಂಟೆಯೂ ನಿರಂತರ ವಿದ್ಯುತ್ ಪೂರೈಕೆಯಾಗುತ್ತಿರಬೇಕಿದೆ. ಒಮ್ಮೆ ವಿದ್ಯುತ್ ಸಂಪರ್ಕ ಕಡಿತವಾದರೂ ಯಂತ್ರ ಕೆಟ್ಟುಹೋಗುವ ಸಾಧ್ಯತೆಯಿದೆ. ಹೀಗಾಗಿ ಈ ಯಂತ್ರಕ್ಕಾಗಿ ಪ್ರತ್ಯೇಕ ವಿದ್ಯುತ್ ಪೂರೈಕೆ ವ್ಯವಸ್ಥೆ ಮಾಡಲಾಗುತ್ತಿದೆ. ಪ್ರತ್ಯೇಕ ಟ್ರಾನ್ಸ್ಫಾರ್ಮರ್, ಜನರೇಟರ್, ಪವರ್ ಬ್ಯಾಕಪ್ ವ್ಯವಸ್ಥೆ ಕಲ್ಪಿಸಲಾಗುತ್ತಿದ್ದು, ಈ ಕೆಲಸಕ್ಕೆ ಹೆಚ್ಚು ಸಮಯ ಹಿಡಿಯುತ್ತಿದೆ.

ಎಲ್ಲವೂ ಪೂರ್ಣಗೊಂಡ ಬಳಿಕ ಎಂಆರ್‌ಐ ಸ್ಕಾ÷್ಯನಿಂಗ್ ಸೇವೆ ಲಭ್ಯವಾಗಲಿದೆ.
ಈಗಿರುವ ಸಿಟಿ ಸ್ಕಾ÷್ಯನಿಂಗ್ ಘಟಕದ ಪಕ್ಕದಲ್ಲಿಯೇ ಹೊಸ ಎಂಆರ್‌ಐ ಘಟಕ ಆರಂಭವಾಗುತ್ತಿದ್ದು, ಈ ಕೊಠಡಿಯಲ್ಲಿ ಸಂಪೂರ್ಣ ಕಬ್ಬಿಣ ರಹಿತ ವ್ಯವಸ್ಥೆಯಿರಲಿದೆ. ಇಲ್ಲಿನ ಎಲ್ಲಾ ಸಲಕರಣೆಗಳೂ ಅಲ್ಯೂಮಿನಿಯಂನದ್ದಾಗಿದ್ದು, ಮೂರು ಹಂತಗಳಲ್ಲಿ ಕಬ್ಬಿಣದ ವಸ್ತುಗಳು ಒಳಗೆ ಬಾರದಂತೆ ನೋಡಿಕೊಳ್ಳುವ ವ್ಯವಸ್ಥೆಯಾಗಲಿದೆ.
ಆಸ್ಪತ್ರೆಯಲ್ಲಿ ಇಬ್ಬರು ರೇಡಿಯಾಲಜಿ ತಜ್ಞರಿದ್ದು, ಅವರು ತುರ್ತಾಗಿ ಬೇಕಾಗಿರುವ ಸ್ಕಾ÷್ಯನಿಂಗ್ ರಿಪೋರ್ಟ್ಗಳನ್ನು ತಕ್ಷಣ ಸ್ಥಳದಲ್ಲಿಯೇ ನೀಡುತ್ತಾರೆ. ಉಳಿದಂತೆ ಸ್ಕಾ÷್ಯನಿಂಗ್ ಆದ ಕೆಲ ಗಂಟೆಗಳಲ್ಲಿ ಆನ್‌ಲೈನ್ ಮೂಲಕ ವೈದ್ಯರು ರಿಪೋರ್ಟ್ ನೀಡಲಿದ್ದಾರೆ. ಸದ್ಯ ಆಸ್ಪತ್ರೆಯಲ್ಲಿರುವ ಸಿಟಿ ಸ್ಕಾ÷್ಯನಿಂಗ್ ಘಟಕವೂ ಇದೇ ವ್ಯವಸ್ಥೆಯಲ್ಲಿ ನಡೆಯುತ್ತಿದ್ದು, ಎಂಆರ್‌ಐ ಘಟಕ ಕೂಡಾ ಹೀಗೆಯೇ ಕಾರ್ಯನಿರ್ವಹಿಸಲಿದೆ ಎಂದು ಕೋಯಿಮ್ಸ್ ಮೂಲಗಳು ತಿಳಿಸಿವೆ.

ಎಂಆರ್‌ಐ ಪೂರ್ಣ ಹೆಸರು ಮ್ಯಾಗ್ನೆಟಿಕ್ ರೆಸೋನೆನ್ಸ್ ಇಮೇಜಿಂಗ್. ಇದು ಒಂದು ರೀತಿಯ ಸ್ಕಾ÷್ಯನಿಂಗ್ ಯಂತ್ರ. ಇದು ಅತ್ಯಂತ ಶಕ್ತಿಯುತ ಮತ್ತು ನಿಯಂತ್ರಿತ ವಿದ್ಯುತ್ ಕ್ಷೇತ್ರಗಳು, ರೇಡಿಯೋ ತರಂಗಗಳು ಮತ್ತು ಕಂಪ್ಯೂಟರ್ ತಂತ್ರಜ್ಞಾನವನ್ನು ಒಳಗೊಂಡಿರುತ್ತದೆ. ಅದರ ಸಹಾಯದಿಂದ, ಮಾನವ ದೇಹದ ಒಳಭಾಗದ ವಿವರವಾದ ಚಿತ್ರಗಳನ್ನು ಹೊರತೆಗೆಯಲಾಗುತ್ತದೆ. ಎಂಆರ್‌ಐ ಸ್ಕಾ÷್ಯನಿಂಗ್‌ನಲ್ಲಿ ಎಕ್ಸ್-ರೇ ವಿಕಿರಣವನ್ನು ಬಳಸಲಾಗುವುದಿಲ್ಲ. ಎಂಆರ್‌ಐ ತಂತ್ರಜ್ಞಾನವನ್ನು ಹೆಚ್ಚಾಗಿ ರೋಗವನ್ನು ಪತ್ತೆಹಚ್ಚಲು, ರೋಗನಿರ್ಣಯ ಮಾಡಲು ಮತ್ತು ಚಿಕಿತ್ಸೆಯನ್ನು ಮೇಲ್ವಿಚಾರಣೆ ಮಾಡಲು ಬಳಸಲಾಗುತ್ತದೆ. ಹೆಚ್ಚಿನ ಎಂಆರ್‌ಐ ಯಂತ್ರಗಳು ದೊಡ್ಡದಾದ, ಟ್ಯೂಬ್ ಆಕಾರದ ಆಯಸ್ಕಾಂತಗಳಾಗಿರುತ್ತವೆ.

ಕೀಲುಗಳು ಮತ್ತು ಮೂಳೆಗಳಿಗೆ ಸಂಬAಧಿಸಿದ ರೋಗಗಳನ್ನು ಪತ್ತೆಹಚ್ಚಲು, ಹೃದಯ ಸಂಬAಧಿ ಕಾಯಿಲೆಗಳನ್ನು ಗುರುತಿಸಲು, ಸ್ತನ ಕ್ಯಾನ್ಸರ್ ಅಪಾಯವನ್ನು ಕಂಡುಹಿಡಿಯಲು, ಬೆನ್ನುಹುರಿ ಮತ್ತು ಮೆದುಳಿನ ಸಮಸ್ಯೆಗಳನ್ನು ಪತ್ತೆಹಚ್ಚಲು, ಗರ್ಭಧಾರಣೆ ಮತ್ತು ಯಕೃತ್ತಿನ ಕ್ಯಾನ್ಸರ್ ಅನ್ನು ಪತ್ತೆಹಚ್ಚಲು, ಬಂಜೆತನಕ್ಕೆ ಚಿಕಿತ್ಸೆ ಪಡೆಯುವ ಮಹಿಳೆಯರಲ್ಲಿ ಗರ್ಭಾಶಯದ ಅಸಹಜತೆಗಳನ್ನು ಪತ್ತೆಹಚ್ಚಲು, ಎಂಡೊಮೆಟ್ರಿಯೊಸಿಸ್ ಮತ್ತು ಫೈಬ್ರಾಯ್ಡ್ಗಳನ್ನು ಒಳಗೊಂಡಿರುವ ಮಹಿಳೆಯರಲ್ಲಿ ಶ್ರೋಣಿಯ ನೋವಿನ ಕಾರಣಗಳನ್ನು ಮೌಲ್ಯಮಾಪನ ಮಾಡಲು, ದೇಹದ ವಿವಿಧ ಭಾಗಗಳಲ್ಲಿ ಹುಣ್ಣುಗಳು, ಗೆಡ್ಡೆಗಳು ಅಥವಾ ಇತರ ಕಾಯಿಲೆಗಳನ್ನು ಪತ್ತೆಹಚ್ಚಲು ಎಂಆರ್‌ಐ ಸ್ಕಾ÷್ಯನಿಂಗ್ ಬಳಸಲಾಗುತ್ತದೆ.

ಜಿಲ್ಲೆಗೆ ಅತ್ಯವಶ್ಯಕವಾಗಿ ಬೇಕಾಗಿದ್ದ ಎಂಆರ್‌ಐ ಸ್ಕಾ÷್ಯನಿಂಗ್ ತಂತ್ರಜ್ಞಾನವನ್ನು ಸರ್ಕಾರ ಕೋಯಿಮ್ಸ್ಗೆ ಮಂಜೂರು ಮಾಡಿದೆ. ಸದ್ಯ ಯಂತ್ರದ ಅಳವಡಿಕೆ ಕೆಲಸ ಬಹುತೇಕ ಮುಕ್ತಾಯಗೊಂಡಿದ್ದು, ಇನ್ನು ಒಂದೂವರೆ ತಿಂಗಳಲ್ಲಿ ಸಾರ್ವಜನಿಕ ಸೇವೆಗೆ ಲಭ್ಯವಾಗಲಿದೆ. ಇದರಿಂದ ಜಿಲ್ಲೆ ಮತ್ತು ಪಕ್ಕದ ಜಿಲ್ಲೆಗಳ ರೋಗಿಗಳಿಗೆ ಅನುಕೂಲವಾಗಲಿದೆ.
ಡಾ.ಮಂತರ್ ಗೌಡ, ಮಡಿಕೇರಿ ಶಾಸಕ

10.70 ಕೋಟಿ ರೂ. ವೆಚ್ಚದಲ್ಲಿ ಎಂಆರ್‌ಐ ಸ್ಕಾ÷್ಯನಿಂಗ್ ಯಂತ್ರ ಅಳವಡಿಕೆ ಕೆಲಸವಾಗುತ್ತಿದೆ. ಶಾಸಕರ ಪ್ರಯತ್ನದಿಂದ ಜಿಲ್ಲೆಯಲ್ಲಿ ಎಂಆರ್‌ಐ ಸೇವೆ ಲಭ್ಯವಾಗುತ್ತಿದ್ದು, ಸ್ಕಾ÷್ಯನಿಂಗ್ ಘಟಕದ ಕೆಲವು ತಾಂತ್ರಿಕ ಕೆಲಸಗಳು ಬಾಕಿ ಉಳಿದಿವೆ. ಸಿಟಿ ಸ್ಕಾ÷್ಯನಿಂಗ್‌ನAತೆಯೇ ಇಲ್ಲಿಯೂ ಆನ್‌ಲೈನ್ ಮೂಲಕ ವರದಿ ನೀಡುವ ವ್ಯವಸ್ಥೆಯಾಗಲಿದ್ದು, ಇದಕ್ಕೆ ಟೆಂಡರ್ ಪ್ರಕ್ರಿಯೆಗಳು ನಡೆದಿವೆ.
ಡಾ.ವಿಶಾಲ್ ಕುಮಾರ್, ಡೀನ್ ಮತ್ತು ನಿರ್ದೇಶಕ, ಕೋಯಿಮ್ಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net