

ವಿಜಯವಾಣಿ ಸುದ್ದಿಜಾಲ ಧಾರವಾಡ
ಜಿಲ್ಲೆಯ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ 3 ಶಾಲೆಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ. 100 ಫಲಿತಾಂಶ ಪಡೆದಿವೆ.
ಹುಬ್ಬಳ್ಳಿ ಅಂಚಟಗೇರಿಯ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ ನಂ. 2ರ ಶ್ರೇಯಾ ರಪಾಟಿ ಶೇ. 99.52, ಮೊಹಮ್ಮದ ಸಾಬೀರ ಮುಲ್ಲಾ ಶೇ. 99.04, ರಿಜ್ವಾನ್ ಅಗಸಿಮನಿ ಶೇ. 98.56, ನಿಸರ್ಗ ಜೊಂಗನವರ ಶೇ. 97.92, ಚೇತನ ಲಮಾಣಿ ಶೇ. 96 ಅಂಕ ಪಡೆದಿದ್ದಾನೆ.
ಧಾರವಾಡ ಗ್ರಾಮೀಣ ಶಿಂಗನಹಳ್ಳಿಯ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಸೊಹೆಬ್‌ಅಹ್ಮದ ಕಿತ್ತೂರ ಶೇ. 98.72, ಪವಿತ್ರಾ ಜಿದ್ದಿಮಠ 97.76, ಗದಿಗೇಶ ರಾಮನಾಳ ಶೇ. 96.64 ಅಂಕ ಪಡೆದಿದ್ದಾನೆ.
ಧಾರವಾಡ ಪೊಲೀಸ್ ಹೆಡ್‌ಕ್ವಾಟರ್ಸ್ ಆವರಣದ ಅಲ್ಪಸಂಖ್ಯಾತರ ಮೌಲಾನಾ ಆಜಾದ್ ಮಾದರಿ ಶಾಲೆಯ ಸಹನಾ ಶಾವಿ ಶೇ. 97.44, ಅಫೀಪಾ ಕಿತ್ತೂರ ಶೇ. 97.12 ಅಂಕ ಪಡೆದಿದ್ದಾರೆ. ಧಾರವಾಡ ಗ್ರಾಮೀಣ ಹೆಣ್ಣು ಮಕ್ಕಳ ಮೊರಾಜಿ ವಸತಿ ಶಾಲೆಯ ಅಮೃತಾ ಹೊಂಡದ ಶೇ. 97.44 ಅಂಕ ಪಡೆದಿದ್ದಾಳೆ ಎಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಽಕಾರಿ ಗೋಪಾಲ ಎಚ್. ಲಮಾಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.