

ವಿಜಯವಾಣಿ ಸುದ್ದಿಜಾಲ ಉಳ್ಳಾಲ
ಸಣ್ಣ ಮೀನುಗಳನ್ನು ಹಿಡಿದರೆ ಕಠಿಣ ದಂಡ ಹಾಕುವ ನಿಯಮ ಮೀನುಗಾರರು ರೂಪಿಸಿದರೆ ಮತ್ಸೃಕ್ಷಾಮ ನೀಗಿಸಲು ಸಾಧ್ಯ, ದಕ್ಷಿಣ ಕನ್ನಡ, ಉಡುಪಿ ಮತ್ತು ಕಾರವಾರ ಜಿಲ್ಲೆಯಲ್ಲಿ ಸಮಗ್ರ ಮೀನುಗಾರಿಕಾ ನೀತಿ ಅಗತ್ಯವಿದ್ದು, ಮುಂದಿನ ಅಧಿವೇಶನದಲ್ಲಿ ಜಾರಿಯಾಗುವ ನಿರೀಕ್ಷೆ ಇದೆ ಎಂದು ಸ್ಪೀಕರ್ ಯು.ಟಿ.ಖಾದರ್ ಹೇಳಿದರು.
ಮಂಗಳೂರು ಕರಾವಳಿ ಅಲ್ಪಸಂಖ್ಯಾತ ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘ ನಿಯಮಿತ ಉತ್ತರ ದಕ್ಕೆ, ಬಂದರು ಇದರ ಮಂಗಳೂರು ಬಂದರಿನ ದಕ್ಷಿಣ ಧಕ್ಕೆಯಲ್ಲಿ ನಿರ್ಮಾಣಗೊಂಡಿರುವ ಕಟ್ಟಡ ‘ಬಹರ್-ಎ-ನೂರ್’ ಶನಿವಾರ ಲೋಕಾರ್ಪಣೆಗೊಳಿಸಿ ಮೀನುಗಾರಿಕಾ ಬಂದರಿನ ಮುಖ್ಯದ್ವಾರದ ಮುಂಭಾಗ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬಂದರು, ಮೀನುಗಾರಿಕೆ ಮತ್ತು ಒಳನಾಡು ಜಲಸಾರಿಗೆ ಇಲಾಖೆ ಸಚಿವ ಮಂಕಾಳ ಎಸ್.ವೈದ್ಯ ಮಂಜುಗಡ್ಡೆ ಸ್ಥಾವರ ಉದ್ಘಾಟಿಸಿದರು. ಮಂಗಳೂರು ಕರಾವಳಿ ಅಲ್ಪಸಂಖ್ಯಾತ ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘ ಅಧ್ಯಕ್ಷ ಜೆ.ಮುಹಮ್ಮದ್ ಇಸಾಕ್ ಅಧ್ಯಕ್ಷತೆ ವಹಿಸಿದ್ದರು. ಶಾಸಕ ವೇದವ್ಯಾಸ ಕಾಮತ್, ಬೆಂಗಳೂರಿನ ಮೀನುಗಾರಿಕಾ ನಿರ್ದೇಶಕ ದಿನೇಶ್ ಕುಮಾರ್ ಕೆ., ಮನಪಾ ವಿಪಕ್ಷ ಮಾಜಿ ನಾಯಕ ಅಬ್ದುಲ್ ರವೂಫ್, ಮಾಜಿ ಮಹಾಪೌರರಾದ ಎಂ.ಶಶಿಧರ್ ಹೆಗ್ಡೆ, ಪ್ರೇಮಾನಂದ ಶೆಟ್ಟಿ, ಮಾಜಿ ಸದಸ್ಯ ಶಂಶುದ್ದೀನ್, ಚಾರ್ಟಡ್ ಅಕೌಂಟೆಂಟ್ ಪ್ರವೀಣ್ ಕುಮಾರ್ ಶೆಟ್ಟಿ, ಪರ್ಸಿನ್ ಬೋಟ್ ಯೂನಿಯನ್ ಅಧ್ಯಕ್ಷ ಅನಿಲ್ ಕುಮಾರ್, ಟ್ರಾಲ್‌ಬೋಟ್ ಯೂನಿಯನ್ ಅಧ್ಯಕ್ಷ ಚೇತನ್ ಬೆಂಗರೆ, ಸೀಫುಡ್ ಬೈಯರ್ಸ್ ಅಸೋಸಿಯೇಶನ್ ಅಧ್ಯಕ್ಷ ಎಸ್.ಎಂ.ಇಬ್ರಾಹಿಂ, ಮಂಗಳೂರು ಹಸಿಮೀನು ಯೂನಿಯನ್ ಅಧ್ಯಕ್ಷ ಕೆ.ಎಲ್.ಇಸ್ಮಾಯಿಲ್, ಒಣಮೀನು ವ್ಯಾಪಾರಸ್ಥರ ಸಂಘ ಅಧ್ಯಕ್ಷ ಅಹ್ಮದ್, ವಕೀಲ ಉದಯಾನಂದ ಎ., ಮಂಗಳೂರು ಅಲ್ಪಸಂಖ್ಯಾತ ಮೀನುಗಾರರ ಗ್ರಾಹಕರ ಸಹಕಾರಿ ಸಂಘ ಅಧ್ಯಕ್ಷ ಅಬ್ದುಲ್ ರಹಿಮಾನ್, ಕಮಿಷನ್ ಏಜೆಂಟ್ ಅಧ್ಯಕ್ಷ ಕೆ.ಅಶ್ರಫ್, ಮೀನುಗಾರಿಕಾ ಇಲಾಖೆ ಜಂಟಿ ನಿರ್ದೇಶಕ ಸಿದ್ದೇಶ್, ಮಂಗಳೂರು ಕರಾವಳಿ ಅಲ್ಪಸಂಖ್ಯಾತ ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘ ಉಪಾಧ್ಯಕ್ಷ ಅಹ್ಮದ್ ಬಾವ ಬಜಾಲ್ ಮೊದಲಾದವರು ಉಪಸ್ಥಿತರಿದ್ದರು.
ಸಂಘದ ಮುಖ್ಯಕಾರ್ಯನಿರ್ವಾಹಣಾಧಿಕಾರಿ ಅಬ್ದುಲ್ ಲತೀಫ್ ಸ್ವಾಗತಿಸಿದರು. ಸಂಘದ ಸಲಹೆಗಾರ ಮಹಮ್ಮದ್ ಮುಸ್ತಫಾ ಮಲಾರ್ ಹರೇಕಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಆಶಿಕ್ ಮಂಜನಾಡಿ ಕಿರಾಅತ್ ಪಠಿಸಿದರು. ತ್ಯಾಗಂ ಹರೇಕಳ ಕಾರ್ಯಕ್ರಮ ನಿರೂಪಿಸಿದರು.
ವಿವಿಧ ಘಟಕಗಳ ಉದ್ಘಾಟನೆ
ಬಂದರು, ಮೀನುಗಾರಿಕೆ ಮತ್ತು ಒಳನಾಡು ಜಲಸಾರಿಗೆ ಇಲಾಖೆ ಸಚಿವ ಮಂಕಾಳ ಎಸ್.ವೈದ್ಯ ಮಂಜುಗಡ್ಡೆ ಸ್ಥಾವರ, ಬೆಂಗಳೂರಿನ ಮೀನುಗಾರಿಕಾ ನಿರ್ದೇಶಕ ದಿನೇಶ್ ಕುಮಾರ್ ಕೆ. ಕಚೇರಿ ಹಾಗೂ ಮನಪಾ ಮಾಜಿ ವಿಪಕ್ಷ ನಾಯಕ ಅಬ್ದುಲ್ ರವೂಫ್ ಸಭಾಭವನ ಉದ್ಘಾಟಿಸಿದರು.
ಅಲ್ಪಸಂಖ್ಯಾತ ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘ ಸಬ್ಸಿಡಿ ದರದಲ್ಲಿ ಡೀಸೆಲ್ ನೀಡುವ ಜತೆ ಮೀನುಗಾರರಿಗೆ ನಿರಂತರ ಕೊಡುಗೆ ನೀಡಿದೆ, ಮಂಗಳೂರು ದಕ್ಷಿಣದಲ್ಲಿ ಮೀನುಗಾರಿಕೆಗೆ 260 ಕೋಟಿ ರೂ. ಮಂಜೂರುಗೊಳಿಸಿದು,್ದ ಎರಡು ಕಾಮಗಾರಿಗಳಿಗೆ ಸಿಆರ್‌ಜೆಡ್‌ನಿಂದ ಅನುಮತಿ ಸಿಕ್ಕಿದೆ. ಸಾಗರಮಾಲಾ ಮೈನಸ್ 7 ಮೀಟರ್ ಡ್ರೆಜ್ಜಿಂಗ್‌ಗೆ 9 ಒಂಭತ್ತು ಬಾರಿ ಟೆಂಡರ್ ಕರೆಯಲಾಗಿದೆ. ಡಿ.ವೇದವ್ಯಾಸ ಕಾಮತ್, ಶಾಸಕ, ಮಂಗಳೂರು ದಕ್ಷಿಣ ಪ್ರಸ್ತುತ ದಿನಗಳಲ್ಲಿ ಮೀನುಗಾರಿಕೆ ಕೇವಲ ಒಂದು ಸಮುದಾಯಕ್ಕೆ ಸೀಮಿತವಾಗಿಲ್ಲ. ಸಮುದ್ರ ಆಂಬ್ಯುಲೆನ್ಸ್ ವ್ಯವಸ್ಥೆಗೆ ಟೆಂಡರ್ ಕರೆಯಲಾಗಿದ್ದು ಆಗಸ್ಟ್‌ನೊಳಗೆ ಕಾರ್ಯಗತವಾಗುವ ನಿರೀಕ್ಷೆ ಇದೆ. ಮಂಗಳೂರು ಧಕ್ಕೆಯ ಮೂರನೇ ಹಂತದ ಹಾಗೂ ಅಭಿವೃದ್ಧಿ ಕಾಮಗಾರಿ 80 ಕೋಟಿ ರೂ. ವೆಚ್ಚದಲ್ಲಿ ನಡೆಯಲಿದ್ದು, ಟೆಂಡರ್ ಕರೆಯಲಾಗಿದೆ. ನಮ್ಮ ಸರ್ಕಾರ ಡಿಸೇಲ್ 1.50 ಲಕ್ಷ ಲೀ.ನಿಂದ ಎರಡು ಲಕ್ಷಕ್ಕೆ ಏರಿಸಿ ಐದು ತಿಂಗಳ ಅವಧಿಯೊಳಗೆ ಉಪಯೋಗಿಸಲು ಸಹಕಾರಿಯಾಗುವಂತೆ ಕ್ರಮಕೈಗೊಂಡಿದೆ. ಮಂಕಾಳ ಎಸ್.ವೈದ್ಯ ಸಚಿವ, ಬಂದರು, ಮೀನುಗಾರಿಕೆ ಮತ್ತು ಒಳನಾಡು ಜಲಸಾರಿಗೆ ಇಲಾಖೆ