ಅಪ್ರಾಪ್ತಳೊಂದಿಗೆ ಮದುವೆ ಮಾಡಿಕೊಂಡ ಯುವಕ; ನಾಲ್ವರ ವಿರುದ್ಧ ದೂರು ದಾಖಲು

Crime Logo
Published on

ರಾಣೆಬೆನ್ನೂರ: ಅಪ್ರಾಪ್ತಳೊಂದಿಗೆ ಮದುವೆ ಮಾಡಿಕೊಂಡ ಆರೋಪದಡಿ ಮದುವೆ ಮಾಡಿಕೊಂಡ ಯುವಕ ಸೇರಿ ನಾಲ್ವರ ವಿರುದ್ಧ ಇಲ್ಲಿಯ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಲೂಕಿನ ಗಂಗಾಪುರ ಗ್ರಾಮದ ಉಮೇಶ ಸೋಮಪ್ಪ ನಂದ್ಯಾಲ ಹಾಗೂ ಇನ್ನೂ 3 ಜನರ ವಿರುದ್ಧ ದೂರು ದಾಖಲಾಗಿರುವುದು.
ಈ ಕುರಿತು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕಾನೂನು ಪರಿವೀಕ್ಷಣಾಧಿಕಾರಿ ಮಾಂತೇಶ ಬಸವನಾಯ್ಕರ ದೂರು ದಾಖಲಿಸಿದ್ದಾರೆ. ಆರೋಪಿಯು 17 ವರ್ಷ 4 ತಿಂಗಳು ತುಂಬಿದ ಅಪ್ರಾಪ್ತಳೊಂದಿಗೆ ಮದುವೆ ಮಾಡಿಕೊಂಡಿದ್ದಾನೆ. ಅದಕ್ಕೆ ಇನ್ನೂ ಮೂವರು ಸಹಕಾರ ನೀಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net