ಅಪ್ರಾಪ್ತಳನ್ನು ಮದುವೆ ಮಾಡಿಕೊಂಡವನ ವಿರುದ್ದ ಎಫ್‌ಐಆರ್

Crime Logo
Published on

ಹಾವೇರಿ: ಅಪ್ರಾಪ್ತಳನ್ನು ಮದುವೆ ಮಾಡಿಕೊಂಡು ಆಕೆಯನ್ನು ಗರ್ಭಿಣಿಯನ್ನಾಗಿ ಮಾಡಿದ ಆರೋಪಿಯ ವಿರುದ್ಧ ಇಲ್ಲಿಯ ಮಹಿಳಾ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ಪ್ರಕರಣ ದಾಖಲಾಗಿದೆ.
ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಶಿರಹಟ್ಟಿಯ ಮಲ್ಲಿಕ್ ರೇಹಾನ್ ಬಿಜಾಪುರ ಮದುವೆ ಮಾಡಿಕೊಂಡ ಆರೋಪಿ.
ಈ ಕುರಿತು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಸರೋಜಾ ಚಿಗೌಡ್ರ ಪೊಲೀಸರಿಗೆ ದೂರು ನೀಡಿದ್ದಾರೆ. ಆರೋಪಿಯು ಅಪ್ರಾಪ್ತಳನ್ನು ಮದುವೆ ಮಾಡಿಕೊಂಡು ಆಕೆಯನ್ನು ಗರ್ಭಿಯನ್ನಾಗಿ ಮಾಡಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net