

ಹಾವೇರಿ: ಅಪ್ರಾಪ್ತಳನ್ನು ಪ್ರೀತಿಸಿ ಆಕೆ ಮೇಲೆ ಅತ್ಯಾಚಾರ ಎಸಗಿ ಗಭಿರ್ಣಿಯನ್ನಾಗಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯೊಬ್ಬನ ವಿರುದ್ಧ ಇಲ್ಲಿಯ ಮಹಿಳಾ ಪೊಲೀಸ್ ಠಾಣೆಯಲ್ಲಿ ಭಾನುವಾರ ಪ್ರಕರಣ ದಾಖಲಾಗಿದೆ.
ತಾಲೂಕಿನ ಅಕ್ಕೂರ ಗ್ರಾಮದ ಬಸನಗೌಡ ಈರನಗೌಡ ರಾಮನಗೌಡ್ರ ಅತ್ಯಾಚಾರ ಎಸಗಿದ ಆರೋಪಿ.
ಈತ ಅಪ್ರಾಪ್ತಳನ್ನು ಪ್ರೀತಿಸಿ ಆಕೆಯ ಮೇಲೆ ಅತ್ಯಾಚಾರ ಎಸಗಿ ಗಭಿರ್ಣಿಯನ್ನಾಗಿ ಮಾಡಿದ್ದಾನೆ ಎನ್ನಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.