ಸಣ್ಣ ನೀರಾವರಿ ಸಚಿವರ ಚೈತನ್ಯ ಸಾಗರ ಗ್ರಂಥ ಬಿಡುಗಡೆ

raichur
raichur
Published on

ರಾಯಚೂರು ದೇಶದ ಯಾವುದೇ ಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸಂಕಷ್ಟ ಬಂದಾಗಲೇಲ್ಲಾ ಸಂಘಟನಾತ್ಮಕ ಶಕ್ತಿಯಾಗಿ ಎನ್.ಎಸ್.ಬೋಸರಾಜ ನೆನಪಾಗುತ್ತಾರೆ. ತೆಲಂಗಾಣದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಬೋಸರಾಜು ಪಾತ್ರ ಪ್ರಮುಖವಾಗಿದೆಂದು ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ಹೇಳಿದರು.

ನಗರದ ಕೃಷಿ ವಿಜ್ಞಾನಗಳ ವಿಶ್ವ ವಿದ್ಯಾಲಯದ ಆವರಣದಲ್ಲಿ ಶನಿವಾರ ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜು ಅವರ ೭೯ ನೇ ಜನ್ಮ ದಿನಾಚರಣೆ ನಿಮಿತ್ತ ಅಭಿಮಾನಿಗಳಿಂದ ಹಮ್ಮಿಕೊಂಡ ಅಭಿನಂದನೆ ಹಾಗೂ ಚೈತನ್ಯ ಸಾಗರ ಗ್ರಂಥ ಬಿಡುಗಡೆ ಕರ‍್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಬೋಸರಾಜು ಹಾಗೂ ನಮ್ಮ ಕುಟುಂಬ ಜತೆಗೆ ಅನೇಕ ರ‍್ಷಗಳಿಂದ ಭಾಂದವ್ಯ ಇದೆ. ನಾನು ನೀರಾವರಿ ಸಚಿವನಾಗಿದ್ದಾಗ ನನಗೆ ಟಿಎಂಸಿ ನೀರು ಎಂದರೆ ತಿಳಿದಿರಲಿಲ್ಲ. ಆದರೆ ಬೋಸರಾಜು ಅವರು ನೀರಾವರಿ ಯೋಜನೆಗಳ ಬಗ್ಗೆ ಸಂಪರ‍್ಣ ಮಾಹಿತಿ ನೀಡಿ, ಅಭಿವೃದ್ದಿಗೆ ಸಾಹಕರಿಸಿದ್ದಾರೆ ಎಂದರು.

೧೯೬೯-೭೦ ಕಾಲಘಟ್ಟದಲ್ಲಿ ಇಂಡಿಕೇಟ್ ಕಾಂಗ್ರೆಸ್ ನಾಯಕರ ಹೊರಗೆ ಹೋಗಿ ಸರ‍್ವಜನಿಕರ ಮಧ್ಯೆ ಮಾತನಾಡಲು ಆಗದೇ ಇರುವ ಸಂರ‍್ಭದಲ್ಲಿ ಎನ್.ಎಸ್.ಬೋಸರಾಜ ಸಂಘಟನಾತ್ಮಕವಾಗಿ ಕರ‍್ಯನರ‍್ವಹಿಸಿದ್ದಾರೆ. ೧೯೭೨-೭೩ ಸಾಲಿನಿಂದಲೂ ರಾಜಕೀಯದಲ್ಲಿ ಸಕ್ರಿಯವಾಗಿ ಕರ‍್ಯನರ‍್ವಹಿಸಿದವರು. ಎಲ್ಲ ನಾಯಕರೊಂದಿಗೆ ವಿಶ್ವಾಸ, ಪ್ರೀತಿಯಿಂದ ಬೆರೆತು ಕೆಲಸ ಮಾಡುವ ನಾಯಕತ್ವದ ಗುಣಗಳು ಮಾದರಿಯಾಗಿದೆ. ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಕಟ್ಟಿ ಬೆಳೆಸಿದ ಕರ‍್ತೀ ಅವರಿಗೆ ಸಲ್ಲುತ್ತದೆ. ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಉಳುವವನೇ ಭೂ ಒಡೆಯ ಸೇರಿದಂತೆ ೧೮ ಅಂಶಗಳನ್ನು ಜಾರಿಗೊಳಿಸಿದ್ದರಿಂದ ಹಿಡಿದು ಇಲ್ಲಿಯವರಗೆ ಎನ್.ಎಸ್.ಬೋಸರಾಜ ಇವರು ಕಾಂಗ್ರೆಸ್ ಪಕ್ಷಕ್ಕೆ ನಿಷ್ಠವಂತರಾಗಿ ಕರ‍್ಯನರ‍್ವಹಿಸಿದ್ದಾರೆ. ಜಿಲ್ಲೆಯ ನೀರಾವರಿ ಯೋಜನೆಗಳು,ಅಭಿವೃದ್ದಿ ಕರ‍್ಯಕ್ರಮಗಳಲ್ಲಿ ಸಚಿವರುಗಳನ್ನು ಬೆನ್ನುಹತ್ತಿ ಕರ‍್ಯನರ‍್ವಹಿಸುವದು ಸಹ ಮಾದರಿಯಾಗಿದೆ.

ಚೈತನ್ಯ ಸಾಗರ ಗ್ರಂಥವನ್ನು ಬಿಡುಗಡೆ ಮಾಡಿದ ಸಭಾಪತಿ ಯು.ಟಿ.ಖಾದರ್ ಮಾತನಾಡಿ, ಎನ್.ಎಸ್.ಬೋಸರಾಜು ಅವರು ಕೇವಲ ವ್ಯಕ್ತಿಯಲ್ಲ ಅವರು ರಾಯಚೂರು ಆಸ್ತಿಯಾಗಿದ್ದಾರೆ. ನಮ್ಮ ರಾಜಕೀಯ ಜೀವನದಲ್ಲಿ ಮರ‍್ಗರ‍್ಶಕರಾಗಿದ್ದಾರೆ. ನಾನು ಉಪಚುನಾವಣೆ ಸ್ರ‍್ಧೆಯಲ್ಲಿ ಇದ್ದಾಗ ಸಚಿವ ಬೋಸರಾಜು ಅವರು ಚುನಾವಣೆ ವೀಕ್ಷಕರಾಗಿದ್ದರು. ತಮ್ಮ ರಾಜಕೀಯ ಜೀವನದಲ್ಲಿ ಸರಳ ವ್ಯಕ್ತಿತ್ವದ ಮೂಲಕ ತಮ್ಮದೆ ಚಾಪು ಮೂಡಿಸಿದ್ದಾರೆ.ನೀರಾವರಿ ಅಭಿವೃದ್ಧಿಯಲ್ಲಿ ಅವರ ಕೊಡುಗೆ ಆಗ್ರಗಣ್ಯ ಸ್ಥಾನದಲ್ಲಿ ಇದೇ ಎಂದು ಹೇಳಿದರು.

ತೆಲಂಗಾಣ ಉಪ ಮುಖ್ಯಮಂತ್ರಿ ಮಲ್ಲು ಭಟ್ಟಿ ವಿಕ್ರಮರ‍್ಕ ಮಾತನಾಡಿ,ಕಾಂಗ್ರೆಸ್ ಪಕ್ಷಕ್ಕೆ ನಿಷ್ಟರಾಗಿರುವ ಗಾಂಧಿವಾದಿ ಎನ್.ಎಸ್.ಬೋಸರಾಜ ಇವರು ತೆಲಂಗಾಣದಲ್ಲಿ ಕಾಂಗ್ರೆಸ್ ರ‍್ಕಾರ ರಚನೆಗೆ ಪ್ರೇರಣೆಯಾಗಿದ್ದಾರೆ. ಸರಿ ಸುಮಾರು ೫೦ ರ‍್ಷಗಳೂ ಅಧಿಕ ಕಾಲ ಕಾಂಗ್ರೆಸ್ ಪಕ್ಷದಲ್ಲಿದ್ದು ಸಲಹೆಗಾರರಾಗಿ ,ಸಂಘಟನಾ ಶಕ್ತಿಯಾಗಿ ಕರ‍್ಯನರ‍್ವಹಿಸಿದ್ದಾರೆ. ಯಾವುದೇ ಸಂರ‍್ಭಧಲ್ಲಿ ಪ ಮರ‍್ಗರ‍್ಶನ ನೀಡುತ್ತಾ ಬಂದಿರುವ ಅವರು ಎಲ್ಲರನ್ನೂ ನಮ್ಮವರು ಎಂಬ ಭಾವನೆಯಿಂದ ಕರ‍್ಯನರ‍್ವಹಿಸುವ ಅವರು ತೆಲಂಗಾಣ, ರ‍್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಕಾರಣೀಭೂತರಾಗಿದ್ದಾರೆ. ತೆಲಂಗಾಣ ಮತ್ತು ರ‍್ನಾಟಕ ಕಾಂಗ್ರೆಸ್ ರ‍್ಕಾರಗಳು ಒಗ್ಗೂಡಿ ಹೋಗುವದಾಗಿ ಹೇಳಿದರು.

ಈ ಸಂರ‍್ಭದಲ್ಲಿ ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜು, ಮಾನ್ವಿ ಶಾಸಕ ಜಿ.ಹಂಪಯ್ಯ ನಾಯಕ. ಸಂಸದ ಜಿ.ಕುಮಾರ ನಾಯಕ, ಮಾಜಿ ಸಂಸದ ಬಿ.ವಿ ನಾಯಕ, ರಾಜಾ ಅಮರೇಶ್ವರ ನಾಯಕ, ಶಾಸಕಿ ಜಿ.ಕರೆಮ್ಮ ನಾಯಕ, ಬಸನಗೌಡ ತರ‍್ವಿಹಾಳ, ಎಂಎಲ್ಸಿ ಬಸನಗೌಡ ಬಾರ‍್ಲಿ, ಪಾರಸಮಲ್ ಸುಖಾಣಿ, ಅಮರೇಗೌಡ ಬಯ್ಯಪೂರ, ಡಿ.ಎಸ್.ಹುಲಗೇರಿ, , ವೆಂಕಟರಾವ್ ನಾಡಗೌಡ, ಪಾಪಾರೆಡ್ಡಿ, ಬಸನಗೌಡ ಬ್ಯಾಗವಾಟ್, ಬಸವರಾಜ್ ಪಾಟೀಲ್ ಅನ್ವರಿ, ಎಲ್.ಹನುಮಂತಯ್ಯ, ಮಹಾಂತೇಶ ಪಾಟೀಲ್ ಅತ್ತನೂರು, ಡಾ. ಸುರೇಶ ಸಗರದ, ನರಸಮ್ಮ ನರಸಿಂಹಲು ಮಾಡಗಿರಿ, ಸಾಜೀದ್ ಸಮೀರ್,ಎಸ್.ಆರ್.ರೆಡ್ಡಿ, ಬಸವರಾಜ್ ಪಾಟೀಲ್ ಅಂದಾನಿ, ಜಯಣ್ಣ, ಕೆ.ಶಾಂತಪ್ಪ ಸೇರಿ ಅನೇಕರಿದ್ದರು.

ತೆಲಂಗಾಣ ಹಾಗೂ ರ‍್ನಾಟಕದ ಮಧ್ಯದಲ್ಲಿ ಕೃಷ್ಣಾ ನದಿ ಹರಿಯುತ್ತದೆ. ಆದರೆ ಜುರಾಲ ಡ್ಯಾಂನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ನಿಲ್ಲುವ ಸಾರ‍್ಥ ಇಲ್ಲದೆ ಇರುವುದರಿಂದ ಬೇಸಿಗೆ ಸಂರ‍್ಭದಲ್ಲಿ ಸಮಸ್ಯೆಯಾಗುತ್ತದೆ. ಆದರಿಂದ ಅಲಮಟ್ಟಿ, ನಾರಾಯಣಪುರ ಜಲಾಶಯದಂತೆ ಜುರಾಲದ ಹತ್ತಿರದಲ್ಲಿ ನೀರು ಸಂಗ್ರಹಣೆ ಅಣೆಕಟ್ಟು ನರ‍್ಮಾಣ ಮಾಡಿ ಸಣ್ಣ ನೀರಾವರಿ ಸಚಿವರು ಹುಟ್ಟುಹಬ್ಬದ ಉಡುಗೊರೆ ನೀಡಲಿ.

ವಾಕಿಟಿ ಶ್ರೀಹರಿ ಪಶುಸಂಗೋಪನಾ ಸಚಿವ ತೆಲಂಗಾಣ

ರಾಯಚೂರಿನಲ್ಲಿ ಕಾಂಗ್ರೆಸ್ ಪಕ್ಷವನ್ನು ಕಟ್ಟಿದ ಕರ‍್ತಿ ಎನ್.ಎಸ್.ಬೋಸರಾಜು ಅವರಿಗೆ ಸಲ್ಲುತ್ತದೆ. ೭೯ನೇ ಇಳಿ ವಯಸ್ಸಿನಲ್ಲಿಯೂ ಅನೇಕ ಅಭಿವೃದ್ದಿ ಕರ‍್ಯಗಳ ಜತೆಗೆ ನೀರಾವರಿಗೆ ಸಂಬಂಧಿಸಿದ ಯೋಜನೆಗಳನ್ನು ಜಾರಿ ಮಾಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಶಿವರಾಜ ತಂಗಡಗಿ ಕನ್ನಡ ಮತ್ತು ಸಂಸ್ಕೃತಿಕ ಸಚಿವ ಬೆಂಗಳೂರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net