ತಂಗಡಗಿ: ಸಮೀಪದ ಬನೋಶಿ ಗ್ರಾಮದಲ್ಲಿನ ಜಮೀನೊಂದರಲ್ಲಿ ಸೋಮವಾರ ರಾತ್ರಿ ಮರವೊಂದಕ್ಕೆ ಅಪ್ರಾಪ್ತ ಬಾಲಕಿಯೊಬ್ಬಳು ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ.
ಬನೋಶಿ ಗಾರಮದ ಬಸಮ್ಮ ಮಾನಪ್ಪ ಚಲವಾದಿ (17) ಮೃತಪಟ್ಟವರು.
ಇನ್ನೂ ಮದುವೆಯಾಗದಿದ್ದರೂ ಆಕೆಯ ಕೊರಳಲ್ಲಿ ತಾಳಿ ಇರುವುದು ಸಂಶಯಗಳಿಗೆ ಕಾರಣವಾಗಿದ್ದು, ತಮ್ಮ ಮಗಳನ್ನು ಕೊಲೆ ಮಾಡಿ ನೇಣಿಗೆ ಹಾಕಲಾಗಿದೆ ಎಂದು ಪಾಲಕರು ಆರೋಪಿಸಿದ್ದಾರೆ. ಸ್ಥಳಕ್ಕೆ ಬಸವನಬಾಗೇವಾಡಿ ಡಿಎಸ್ಪಿ ಬಲ್ಲಪ್ಪ ನಂದಗಾವಿ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಶವವನ್ನು ಮರಣೋತ್ತರ ಪರೀಕ್ಷೆಗೆ ವಿಜಯಪುರ ಜಿಲ್ಲಾಸ್ಪತ್ರೆಗೆ ಕಳುಹಿಸಲಾಗಿದೆ. ಮುದ್ದೇಬಿಹಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಸಮ್ಮ ಚಲವಾದಿನೇಣು ಬಿಗಿದ ಸ್ಥಿತಿಯಲ್ಲಿ ಅಪ್ರಾಪ್ತ ಬಾಲಕಿ ಶವ ಪತ್ತೆ