

ರಾಣೆಬೆನ್ನೂರ: ಅಪ್ರಾಪ್ತನೊಬ್ಬ ಬೈಕ್ ಅಪಘಾತ ಪಡಿಸಿದ ಪ್ರಕರಣಕ್ಕೆ ಸಂಬಂಧಿಸಿ ಆತನಿಗೆ ಬೈಕ್ ನೀಡಿದ ತಂದೆಗೆ 27 ಸಾವಿರ ರೂ. ದಂಡ ವಿಧಿಸಿ ಇಲ್ಲಿಯ ಅಧಿಕ ಸಿವಿಲ್ ನ್ಯಾಯಾಧೀಶೆ ಮೇಶ್ರೀ ತೀರ್ಪು ನೀಡಿ ಆದೇಶಿಸಿದೆ.
ನಗರದ ದಿಳ್ಳೆಪ್ಪ ಗುತ್ತೆಪ್ಪ ಕಾಟಿ (50) ಎಂಬುವರಿಗೆ ದಂಡ ವಿಧಿಸಿರುವುದು.
ಈತ ಕಳೆದ ಜೂನ್ 30ರಂದು ತಮ್ಮ ಪುತ್ರ ಅಪ್ರಾಪ್ತ ಎಂದು ಗೊತ್ತಿದ್ದರೂ ಬೈಕ್ ನೀಡಿದ್ದರು. ಆತ ಬೈಕ್ನಲ್ಲಿ ತೆರಳುತ್ತಿದ್ದ ಸಮಯದಲ್ಲಿ ಜಾಕೀರ ಎಂಬುವರಿಗೆ ಡಿಕ್ಕಿ ಪಡಿಸಿದ್ದನು. ಇದರಿಂದ ಗಾಯಗೊಂಡ ಜಾಕೀರ ಈ ಕುರಿತು ಸಂಚಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಪ್ರಕರಣದ ತನಿಖೆ ನಡೆಸಿದ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಟ್ಟಿ ಸಲ್ಲಿಸಿದ್ದರು. ಸಾಾಧಾರಗಳ ಸಮೇತ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಧೀಶರು ಬೈಕ್ ಮಾಲೀಕ ದಿಳ್ಳೆಪ್ಪನಿಗೆ ದಂಡ ವಿಧಿಸಿ ಆದೇಶಿಸಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಪ್ರಶಾಂತ ಯಲಿಗಾರ ವಾದ ಮಂಡಿಸಿದ್ದರು.