

ಪರಶುರಾಮಪುರ: ಚೌಳೂರು ಬ್ಯಾರೇಜ್ ಕಂ. ಬ್ರಿಡ್ಜ್‌ಗೆ ಕೃಷಿ ಸಚಿವ ಚೆಲುವರಾಯಸ್ವಾಮಿ ಮಂಗಳವಾರ ಭೇಟಿ ನೀಡುವ ಹಿನ್ನೆಲೆಯಲ್ಲಿ ಕೃಷಿ ಅಧಿಕಾರಿಗಳು ಸೋಮವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ತಾಲೂಕು ಕೃಷಿ ಇಲಾಖೆ ಎಡಿಎ ಅಶೋಕ, ಕೃಷಿ ಅಧಿಕಾರಿ ಜೀವನ್ ಭೇಟಿ ನೀಡಿದ್ದರು. ಬಳಿಕ ಜುಂಜುರಗುಂಟೆ ಗೇಟ್ ಸಮೀಪದ ಜಮೀನುಗಳಿಗೆ ಭೇಟಿ ನೀಡಿ ಒಣಗುತ್ತಿದ್ದ ಶೇಂಗಾ ಬೆಳೆ ವೀಕ್ಷಿಸಿ, ಈ ಕುರಿತು ಸಚಿವರು ಮಾಹಿತಿ ಪಡೆಯಲಿದ್ದಾರೆ ಎಂದರು.