ಸಚಿವರಾದ ಡಾ. ಸುಧಾಕರ, ಡಾ. ಶರಣಪ್ರಕಾಶ ಭೇಟಿ; ಶಾಸಕ ರಾಯರೆಡ್ಡಿ ಫಾರ್ಮ್ ಹೌಸ್‌ನಲ್ಲಿ ರಾಜಕೀಯ ಚರ್ಚೆ?

Dr. M.C.Sudhakar, Dr. Sharanprakash patil and Basavaraj Rayareddi
Published on

ಧಾರವಾಡ: ನಗರ ಹೊರವಲಯದ ಗೋವಾ ರಸ್ತೆಯಲ್ಲಿರುವ ಯಲಬುರ್ಗಾ ಶಾಸಕ ಬಸವರಾಜ ರಾಯರೆಡ್ಡಿ ಅವರ ಫಾರ್ಮ್ ಹೌಸ್‌ ಗೆ ಇಬ್ಬರು ಸಚಿವರು ಸೋಮವಾರ ಭೇಟಿ ನೀಡಿದ್ದು ರಾಜಕೀಯದಲ್ಲಿ ಕುತೂಹಲ ಮೂಡಿಸಿದೆ. ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ ಭೇಟಿ ನೀಡಿ ರಾಯರೆಡ್ಡಿ ಅವರೊಂದಿಗೆ ಕೆಲಕಾಲ ಚರ್ಚಿಸಿದರು.
ಅಭಿವೃದ್ಧಿ ವಿಷಯವಾಗಿ ರಾಯರೆಡ್ಡಿ ಅವರು ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದಿರುವ ಹಿನ್ನೆಲೆಯಲ್ಲಿ ಸಚಿವರಿಬ್ಬರು ಅವರನ್ನು ಭೇಟಿ ಮಾಡಿ ಚರ್ಚಿಸಿದರು ಎನ್ನಲಾಗಿದೆ.
ಭೇಟಿಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ರಾಯರೆಡ್ಡಿ, ಕೊಪ್ಪಳ ಜಿಲ್ಲೆಯಲ್ಲಿ ಬರಗಾಲ ಆವರಿಸಿದೆ. ವಿದ್ಯುತ್ ಸಮರ್ಪಕವಾಗಿ ಪೂರೈಕೆಯಾಗುತ್ತಿಲ್ಲ. ಜೊತೆಗೆ ಟ್ರಾನ್ಸ್-Áರ್ಮರ್‌ಗಳು ಸುಟ್ಟು ಹೋಗುತ್ತಿವೆ. ಆದರೂ ಜೆಸ್ಕಾಂ ಅಽಕಾರಿಗಳು ಸ್ಪಂದಿಸುತ್ತಿಲ್ಲ. ಜೆಸ್ಕಾಂ ಎಂ.ಡಿ. ಹಂತದ ಅಽಕಾರಿಗಳನ್ನು ಸಿಎಂ ಹಂತದವರೇ ಕೇಳಬೇಕು. ಹೀಗಾಗಿ ಸಭೆ ಮÁಡಿ ಎಂದು ಸಿಎಂಗೆ ಪತ್ರ ಬರೆದಿದ್ದೇನೆ. ಜನರಿಗೆ ಗೊತ್ತಾಗಲಿ ಎಂದು ಆ ಪತ್ರ ಮÁಧ್ಯಮಗಳಿಗೆ ಬಿಡುಗಡೆ ಮÁಡಿದ್ದೆ. ಸೆ. ೫ರಂದು ಇಂಧನ ಸಚಿವರು ಸಭೆ ಕರೆದಿದ್ದಾರೆ. ನನ್ನ ಪತ್ರದಿಂದ ಇಡೀ ಜೆಸ್ಕಾಂ ವ್ಯಾಪ್ತಿಯ ಸಮಸ್ಯೆಗಳು ಪರಿಹಾರ ಆಗುತ್ತದೆ. ಇದನ್ನು ನಕರಾತ್ಮಕವಾಗಿ ತೆಗೆದುಕೊಂಡರೆ ಹೇಗೆ? ಎಂದು ಪ್ರಶ್ನಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net