ಏರ್ಪೋರ್ಟ್‌ನಲ್ಲಿ ಮಕ್ಕಳೊಂದಿಗೆ ಸಚಿವರ ಮಾತುಕತೆ

shimogga airport school children
ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಮಕ್ಕಳೊಂದಿಗೆ ಕುಶಲೋಪರಿ ನಡೆಸಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ.
Published on

ಶಿವಮೊಗ್ಗ: ಶೈಕ್ಷಣಿಕ ಪ್ರವಾಸಕ್ಕಾಗಿ ಶಿವಮೊಗ್ಗದ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಉಂಬ್ಳೆಬೈಲ್‌ನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮಕ್ಕಳೊಂದಿಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಕುಶಲೋಪರಿ ನಡೆಸಿದರು. ವಿವಿಧ ಕಾರ್ಯಕ್ರಮಗಳ ನಿಮಿತ್ತ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ವಿಮಾನದಲ್ಲಿ ಆಗಮಿಸಿದ ಸಚಿವರು, ವಿಮಾನ ನಿಲ್ದಾಣದಲ್ಲಿ ಮಕ್ಕಳನ್ನು ಕಂಡು ಖುಷಿಪಟ್ಟರು. ಈ ವೇಳೆ ಎಲ್ಲ ಮಕ್ಕಳೊಂದಿಗೆ ಮಾತುಕತೆ ನಡೆಸಿದರು. ವಿಮಾನ ನಿಲ್ದಾಣಕ್ಕೆ ಬಂದಿರುವ ಬಗ್ಗೆ ಮಕ್ಕಳಿಂದಲೇ ತಿಳಿದುಕೊಂಡರು. ಮಕ್ಕಳಿಗೆ ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಖಿ ಅಷ್ಟೇ ಬಹುಮುಖ್ಯ. ಇದರಿಂದ ಮಕ್ಕಳಿಗೆ ತಾವು ವೀಕ್ಷಿಸಿದ ಸ್ಥಳದ ಬಗ್ಗೆ ಬಹುಕಾಲ ನೆನಪಿನಲ್ಲಿ ಉಳಿಯುತ್ತದೆ. ಜತೆಗೆ ಇನ್ನೂ ಹೆಚ್ಚಿನ ಜ್ಞಾನಾರ್ಜನೆ ಪಡೆಯಲು ದಾರಿಯಾಗಿದೆ. ಇದೇ ರೀತಿ ಅವಕಾಶವನ್ನು ಕಲ್ಪಿಸುವಂತೆ ಶಿಕ್ಷಕರಿಗೆ ಸಚಿವರು ಸೂಚಿಸಿದರು. ಸಂತೆಕಡೂರು ವಿಜಯ್ ಕುಮಾರ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net