ಜಿಲ್ಲೆಯ ರಸ್ತೆಗಳ ಹೊಂಡ ಮುಚ್ಚಲು ಸಚಿವರ ಸೂಚನೆ

Minister-Meeting
Published on

ಕಾರವಾರ: ಜಿಲ್ಲೆಯ ರಸ್ತೆಗಳ ಹೊಂಡ ಮುಚ್ಚುವಂತೆ ಲೋಕೋಪಯೋಗಿ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಽಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಪಿಡಬ್ಲುಡಿ, ಜಿಪಂ ಇಂಜಿನಿಯರಿಂಗ್ ಮುಂತಾದ ಕಾಮಗಾರಿ ಇಲಾಖೆ ಅಧಿಕಾರಿಗಳ ಮುಚ್ಚಿದ ಬಾಗಿಲ ಸಭೆಯನ್ನು ಶುಕ್ರವಾರ ಇಡೀ ದಿನ ನಡೆಸಿದ ಬಗ್ಗೆ ಅವರು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ವಿಸ್ತರಣೆಯಲ್ಲಿ ಆಗಿರುವ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆಯಲಾಯಿತು. ಬಂದ್ ಮಾಡಿರುವ ಕೆಲ ಸೇತುವೆಗಳನ್ನು ಪರಿಶೀಲಿಸಿ ಮರು ವಾಹನ ಸಂಚಾರ ಪ್ರಾರಂಭಿಸುವಂತೆ ಸೂಚಿಸಲಾಯಿತು ಎಂದು ಅವರು ತಿಳಿಸಿದ್ದಾರೆ.
ವರ್ಗಾವಣೆ ಸಹಜ:
ಸಭೆಗೂ ಪೂರ್ವದಲ್ಲಿ ಮಾಧ್ಯಮ ಪ್ರತಿನಿಽಗಳ ಜತೆ ಮಾತನಾಡಿದ ಅವರು, ಅಧಿಕಾರಿಗಳ ವರ್ಗಾವಣೆ ಸಹಜ. ಎಡಿಸಿ ಸಾಜಿದ್ ಮುಲ್ಲಾ ಅವರನ್ನು ಉತ್ತರ ಕನ್ನಡಕ್ಕೆ ನೇಮಿಸಿ ಆದೇಶವಾಗಿದೆ. ವರ್ಗಾವಣೆ ಆದೇಶವಾಗಿ 20 ದಿನವಾದರೂ ಹುದ್ದೆಗೆ ಹಾಜರಾಗದೇ ಇರುವುದು ದೊಡ್ಡ ವಿಷಯವಲ್ಲ. ಅವರು ಬಂದು ಹಾಜರಾಗಬಹುದು. ಹಿಂದೆಯೂ ತಿಂಗಳ ವರೆಗೆ ಎಡಿಸಿ ಹುದ್ದೆ ಖಾಲಿ ಇತ್ತು ಎಂದರು.
ರಾಜ್ಯದಲ್ಲಿ ವಿಧಾನಸಭೆ ಉಪ ಚುನಾವಣೆ ಘೋಷಣೆಯಾಗಿದೆ. ಎಲ್ಲ ಮೂರೂ ಸ್ಥಾನಗಳನ್ನು ಕಾಂಗ್ರೆಸ್ ಗೆಲ್ಲುವ ವಿಶ್ವಾಸವಿದೆ. ಅಭ್ಯರ್ಥಿ ಘೋಷಣೆಯಾದ ನಂತರ ಎಲ್ಲಿ ಪ್ರಚಾರ ಮಾಡಬೇಕು ಎಂಬ ಸೂಚನೆ ಬರುತ್ತದೆ. ಪಕ್ಷದ ಸೂಚನೆಯಂತೆ ಪ್ರಚಾರ ನಡೆಸಲಿದ್ದೇವೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net