

ಬೆಳಗಾವಿ:ಚಿಕ್ಕೋಡಿ ತಾಲೂಕಿನ ಹಿರೇಕೋಡಿ ಗ್ರಾಮದ ನಂದಿಪರ್ವತ ಆಶ್ರಮದ ಜೈನಮುನಿ ಆಚಾರ್ಯ ಶ್ರೀ 108 ಕಾಮಕುಮಾರ ನಂದಿ ಮಹಾರಾಜರನ್ನು ಕೊಲೆ ಮಾಡಿರುವವರಿಗೆ ಗಲ್ಲು ವಿಧಿಸಬೇಕು. ಜೈನ ಮುನಿ, ಬಸದಿಗಳಿಗೆ ರಕ್ಷಣೆ ನೀಡುವಂತೆ ಎಂದು ಆಗ್ರಹಿಸಿ ಸೋಮವಾರ ಕರ್ನಾಟಕ ನವ ನಿರ್ಮಾಣ ಸೇನೆ ಕಾರ್ಯಕರ್ತರು ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರಿಗೆ ಮನವಿ ಸಲ್ಲಿಸಿದರು.
ರಾಜ್ಯದ ಕಲೆ, ಸಾಹಿತ್ಯ, ಧಾರ್ಮಿಕ ಸಂಸ್ಕೃತಿಗೆ ಅಮೂಲ್ಯ ಕೊಡುಗೆ ನೀಡಿ ಶ್ರೀಮಂತಗೊಳಿಸಿರುವ ಜೈನ ಧರ್ಮದ ಯತಿಗಳ ಮೇಲೆ ಹಲ್ಲೆ, ಕೊಲೆಗಳು ಖಂಡನೀಯ. ರಾಜ್ಯ ಧರ್ಮವಾಗಿ ಬೆಳೆದ ಬಂದಿರುವ ಜೈನ ಧರ್ಮ ಸಮಾಜಕ್ಕೆ ಅನೇಕ ಕೊಡುಗೆಗಳನ್ನು ನೀಡಿದೆ. ಯಾರಿಗೂ ಕೆಡ ಬಯಸಿದರುವ ಧರ್ಮವನ್ನು ರಕ್ಷಿಸುವುದು ಪ್ರತಿಯೊಬ್ಬರು ಜವಾಬ್ದಾರಿ. ಹಾಗಾಗಿ ಸರ್ಕಾರವು ಕೂಡಲೇ ಜೈನ ಮುನಿ, ಬಸದಿಗಳಿಗೆ ಸೂಕ್ತ ರಕ್ಷಣೆ ನೀಡಲು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ಜಿಲ್ಲಾಧ್ಯಕ್ಷ ಬಾಬು ಸಂಗೋಡಿ, ಉದಯ ಪದ್ಮಣ್ಣವರ, ಪ್ರಮೋದ ಅನಗೋಳ, ಸಚಿನ ಪಾಟೀಲ ಇತರರಿದ್ದರು.