ಹೇಮಾವತಿ ಜಲಾಶಯಕ್ಕೆ ಸಚಿವ ಬಾಗಿನ

ಹೇಮಾವತಿ ಜಲಾಶಯಕ್ಕೆ ಸಚಿವ ಬಾಗಿನ
Published on

ಹಾಸನ: ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಬೈರೇಗೌಡ ಶನಿವಾರ ಗೊರೂರಿನ ಹೇಮಾವತಿ ಜಲಾಶಯಕ್ಕೆ ಬಾಗಿನ ಸಮರ್ಪಿಸಿದರು.

ಬಾಗಿನ ಅರ್ಪಣೆ ಅಂಗವಾಗಿ ಹೇಮಾವತಿ ಜಲಾಶಯ ಗೇಟ್‌ಗಳನ್ನು ಹೂವು, ತಳಿರು ತೋರಣಗಳಿಂದ ಅಲಂಕರಿಸಲಾಗಿತ್ತು. ನದಿಗೆ ವಿಶೇಷ ಪೂಜೆ ಸಲ್ಲಿಸಿದ ಗಣ್ಯರು ಸಂಪ್ರದಾಯದಂತೆ ಬಾಗಿನ ಅರ್ಪಿಸಿದರು. ನಂತರ 6 ಕ್ರಸ್ಟ್ ಗೇಟ್ ಮೂಲಕ ಅರ್ಧ ಗಂಟೆ ನೀರು ಬಿಡಲಾಯಿತು. ಹಾಲ್ನೊರೆಯಂತೆ ಉಕ್ಕಿ ಹರಿದ ಜಲಧಾರೆಯನ್ನು ಜನರು ಕಣ್ತುಂಬಿಕೊಂಡರು.

ಇದೇ ವೇಳೆ ಹಾಸನಾಂಬ ಹಾಗು ಸಿದ್ದೇಶ್ವರಸ್ವಾಮಿ ಜಾತ್ರಾ ಮಹೋತ್ಸವ ಯಶಸ್ಸಿಗೆ ಸಹಕರಿಸಿದ ವಿವಿಧ ಇಲಾಖೆ ನೌಕರರು, ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಶಿಬಿರಾರ್ಥಿಗಳು, ಪೌರಕಾರ್ಮಿಕರಿಗೆ ಜಿಲ್ಲಾಡಳಿತದಿಂದ ಔತಣಕೂಟ ಏರ್ಪಡಿಸಲಾಗಿತ್ತು. ಸಂಸದ ಶ್ರೇಯಸ್ ಪಟೇಲ್, ಶಾಸಕರಾದ ಕೆ.ಎಂ. ಶಿವಲಿಂಗೇಗೌಡ, ಸಿ.ಎನ್.ಬಾಲಕೃಷ್ಣ, ಸಿಮೆಂಟ್ ಮಂಜು, ಹುಡಾ ಅಧ್ಯಕ್ಷ ಪಟೇಲ್ ಶಿವಪ್ಪ, ಜಿಲ್ಲಾಧಿಕಾರಿ ಕೆ.ಎಸ್.ಲತಾಕುಮಾರಿ, ಎಸ್ಪಿ. ಮೊಹಮ್ಮದ್ ಸುಜೀತಾ, ಜಿಪಂ ಸಿಇಒ ಬಿ.ಆರ್.ಪೂರ್ಣಿಮಾ, ಕಾಂಗ್ರೆಸ್ ಮುಖಂಡರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net