

ಕುಂದಾಪುರ: ವಾಲ್ಮೀಕಿ ನಿಗಮದಲ್ಲಿ ವಾಡಿದ ಹಗರಣದ ಹಣವನ್ನು ತೆಲಂಗಾಣ ಹಾಗೂ ಆಂಧ್ರಪ್ರದೇಶ ರಾಜ್ಯಗಳ ಚುನಾವಣೆಗೆ ಕಾಂಗ್ರೆಸ್ ಪಾರ್ಟಿ ಫಂಡ್ ಆಗಿ ಹೋದದ್ದು ಎಲ್ಲರಿಗೂ ತಿಳಿದಿದೆ. ಕಾಂಗ್ರೆಸ್‌ನ ಸಚಿವರು, ಶಾಸಕರೇ ಸರ್ಕಾರದ ಭ್ರಷ್ಟಾಚಾರದಿಂದ ಬೇಸತ್ತಿದ್ದಾರೆ ಎಂದು ಮಂಗಳೂರು ಬಿಜೆಪಿ ಸಹಪ್ರಭಾರಿ ರಾಜೇಶ್ ಕಾವೇರಿ ಹೇಳಿದರು.
ರಾಜ್ಯ ಸರ್ಕಾರದ ವಿರುದ್ಧ ಕುಂದಾಪುರ ಪುರಸಭೆ ಎದುರು ಸೋಮವಾರ ಬಿಜೆಪಿ ನಡೆಸಿದ ಪ್ರತಿಭಟನೆಯಲ್ಲಿ ಮಾತನಾಡಿದರು.
ಕುಂದಾಪುರ ಪುರಸಭೆ ಅಧ್ಯಕ್ಷ ಮೋಹನದಾಸ ಶೆಣೈ ಮಾತನಾಡಿ, ಸಾರ್ವಜನಿಕರ ಬದುಕನ್ನು ಬರಡಾಗಿಸಿದ ಸರ್ಕಾರ ಜನಸಾವಾನ್ಯರ ಸಾವಾನ್ಯ ಕೆಲಸ ಕಾರ್ಯಗಳಿಗೂ ಕಾನೂನು ಕಟ್ಟಳೆ ಮೂಲಕ ಅಂಕುಶ ಹಾಕಿದೆ ಎಂದರು.
ಪುರಸಭೆ ಉಪಾಧ್ಯಕ್ಷೆ ವನಿತಾ ಬಿಲ್ಲವ, ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಭಾಕರ ವಿ., ಸದಸ್ಯರಾದ ಗಿರೀಶ್ ಜಿ.ಕೆ., ಸಂತೋಷ್ ಕುವಾರ್ ಶೆಟ್ಟಿ, ರಾವೇಂದ್ರ ಖಾರ್ವಿ, ಶೇಖರ ಪೂಜಾರಿ, ಸಂದೀಪ್ ಖಾರ್ವಿ, ವೀಣಾ ಭಾಸ್ಕರ್, ರೋಹಿಣಿ ಉದಯ ಕುವಾರ್, ಶ್ವೇತಾ ಸಂತೋಷ್, ಶಕ್ತಿಕೇಂದ್ರ ಅಧ್ಯಕ್ಷ ರಾಜೇಶ್ ಕಡ್ಗಿಮನೆ, ದಿವಾಕರ್ ಕಡ್ಗಿ, ರತ್ನಾಕರ್ ಚರ್ಚ್‌ರಸ್ತೆ, ಗುಣರತ್ನಾ, ಅರುಣ್ ಬಾಣ, ನಾಗರಾಜ ಕಾಂಚನ್, ಪ್ರಕಾಶ್ ಆರ್.ಖಾರ್ವಿ, ವಿಜಯ ಎಸ್.ಪೂಜಾರಿ, ಗಿರೀಶ್ ಕುಂದಾಪುರ, ಮಹಿಳಾ ಮೋರ್ಚಾ ಅಧ್ಯಕ್ಷೆ ಸೌರಭಿ ಪೈ ಮೊದಲಾದವರು ಇದ್ದರು.