ವಂಚಕರ ಪರವಾಗಿ ಸಚಿವರ ವಕಾಲತ್ತು: ಅರುಣ್ ಆಕ್ರೋಶ

arun
Published on

ಶಿವಮೊಗ್ಗ: ಚಿಕ್ಕಬಳ್ಳಾಪುರದ ರೈತರಿಗೆ ವಂಚನೆ ಮಾಡಿದವರ ಪರವಾಗಿ ಸಚಿವ ಜಮೀರ್ ಅಹಮದ್ ಪೊಲೀಸರೆದುರು ವಕಾಲತ್ತು ವಹಿಸಿದ್ದಾರೆ. ರೈತರಿಗೆ ಮೋಸವಾಗಿದ್ದರೂ ಅಲ್ಲಿನ ಶಾಸಕ ಪ್ರದೀಪ್ ಈಶ್ವರ್ ಪ್ರತಿರೋಧ ತೋರಿಲ್ಲ. ಇದು ರಾಜ್ಯ ಸರ್ಕಾರದ ದುರಾಡಳಿತಕ್ಕೆ ನಿದರ್ಶನ ಎಂದು ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತೆಲಂಗಾಣದ ವ್ಯಾಪಾರಿಗಳು ಕರ್ನಾಟಕದ ರೈತರಿಂದ 1.89 ಕೋಟಿ ರೂ. ವೌಲ್ಯದ ಜೋಳ ಖರೀದಿ ಮಾಡಿ ಹಣ ಪಾವತಿಸದೆ ಮೋಸ ಮಾಡಿದ್ದಾರೆ. ವಂಚನೆ ಆರೋಪಿ ಅಕ್ಬರ್ ಪಾಷಾ ಎಂಬುವವರನ್ನು ಪೊಲೀಸರಿಂದ ಜಮೀರ್ ನೇರವಾಗಿ ಠಾಣೆ ಅಕಾರಿಗಳಿಗೆ ಕರೆ ಮಾಡಿ ಪ್ರಭಾವ ಬೀರುವ ಪ್ರಯತ್ನ ಮಾಡಿದ್ದಾರೆ. ರೈತರ ಪರವಾಗಿ ನಿಲ್ಲಬೇಕಿದ್ದ ಸಚಿವರು ವಂಚಕರ ಪರವಾಗಿ ಮಾತನಾಡಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಚಿಕ್ಕಬಳ್ಳಾಪುರ ಕ್ಷೇತ್ರದ ಶಾಸಕ ಪ್ರದೀಪ್ ಈಶ್ವರ್ ತಮ್ಮ ಕ್ಷೇತ್ರದ ರೈತರ ಪರ ಮಾತನಾಡಲೇ ಇಲ್ಲ. ಜನರ ಗಮನ ಸೆಳೆಯಲು, ವೈಯಕ್ತಿಕ ಪ್ರಚಾರಕ್ಕಾಗಿ ಪ್ರತಿಪಕ್ಷಗಳ ಮೇಲೆ ವಾಗ್ದಾಳಿ ನಡೆಸುವ ಪ್ರದೀಪ್ ಈಶ್ವರ್ ಈ ವಿಷಯದಲ್ಲಿ ವೌನ ವಹಿಸಿರುವುದೇಕೆ ಎಂದು ಪ್ರಶ್ನಿಸಿದ್ದಾರೆ.

ರಾಜೀವ್ ಗಾಂ ಹೌಸಿಂಗ್ ಕಾರ್ಪೋರೇಶನ್‌ನಲ್ಲಿ ಭ್ರಷ್ಟಾಚಾರ ನಡೆಯುತ್ತಿರುವ ಬಗ್ಗೆ ಕಾಂಗ್ರೆಸ್ ಶಾಸಕ ಬಿ.ಆರ್. ಪಾಟೀಲ್ ಇತ್ತೀಚೆಗೆ ಬಹಿರಂಗಪಡಿಸಿದ್ದಾರೆ. ಜಮೀರ್ ತಮ್ಮ ಇಲಾಖೆಯೊಳಗಿನ ಭ್ರಷ್ಟಾಚಾರವನ್ನು ನಿಯಂತ್ರಿಸಲು ವಿಲರಾಗಿದ್ದಾರೆ. ಇದೀಗ ವಂಚಕರ ಪರವಾಗಿ ಪ್ರಭಾವ ಬೀರಿದ್ದಾರೆ. ಭ್ರಷ್ಟಾಚಾರ, ಅಕಾರ ದುರ್ಬಳಕೆ ಮತ್ತು ರೈತರಿಗೆ ಅನ್ಯಾಯ ಎಸಗಿರುವ ಜಮೀರ್ ಅವರಿಗೆ ಸಚಿವರಾಗಿ ಮುಂದುವರಿಯುವ ನೈತಿಕತೆ ಇಲ್ಲ. ಅವರನ್ನು ಸಚಿವ ಸಂಪುಟದಿಂದ ಸಿಎಂ ಕೈಬಿಡಬೇಕೆಂದು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net