ಸಚಿವರ ಸಹಕಾರದಿಂದ ಪ್ರಗತಿ

21kabbur1
ಕಬ್ಬೂರ ಕೆಇಬಿ ಬಳಿ ರಸ್ತೆ ಕಾಮಗಾರಿಗೆ ಕಾಮಗಾರಿಗೆ ಶಾಸಕ ದುರ್ಯೋಧನ ಐಹೊಳೆ ಭೂಮಿಪೂಜೆ ನೆರವೇರಿಸಿದರು. ಸುರೇಶ ಬೆಲ್ಲದ, ಮಹಾಲಿಂಗ ಹಂಜಿ, ಶಾಂತಾರಾಮ ಎಂಟೆತ್ತಿನರ, ರಪ್ಪ ಕಾಕೋಳ ಇತರರಿದ್ದರು.
Published on

ಕಬ್ಬೂರ: ರಾಯಬಾಗ ಕ್ಷೇತ್ರದ ಮಂಗಸೂಳಿ-ಲಕ್ಷ್ಮೇಶ್ವರ ರಾಜ್ಯ ಹೆದ್ದಾರಿ ಅಭಿವದ್ಧಿ ಹಾಗೂ ಕುಡಚಿ ವಿಧಾನಸಭೆ ಕ್ಷೇತ್ರದಿಂದ ಕಬ್ಬೂರಿನ ಕೊನೆಯ ವರೆಗೆ 7 ಮೀಟರ್ ರಸ್ತೆ ಅಗಲೀಕರಣ ಮಾಡಲು ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಸಾಕಷ್ಟು ವಿಶೇಷ ಅನುದಾನ ನೀಡಿ ಕ್ಷೇತ್ರದ ಅಭಿವದ್ಧಿಗೆ ಸಹಕಾರ ನೀಡಿದ್ದಾರೆ ಎಂದು ಶಾಸಕ ದುರ್ಯೋಧನ ಐಹೊಳೆ ಹೇಳಿದರು.

ಲೋಕೋಪಯೋಗಿ ಇಲಾಖೆಯಿಂದ ಬಿಡುಗಡೆಯಾದ ಇಲ್ಲಿನ ಕೆಇಬಿಯಿಂದ ರಾಯಬಾಗ ಮಾರ್ಗದ 1.5 ಕಿ.ಮೀ. ರಸ್ತೆ ಅಗಲೀಕರಣ ಹಾಗೂ ಡಾಂಬರೀಕರಣ ಕಾಮಗಾರಿಗೆ ಗುರುವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಕರಗಾವ ಏತ ನೀರಾವರಿ ಯೋಜನೆಗೆ ಶೀಘ್ರ ಚಾಲನೆ ನೀಡಲಾಗುವುದು ಎಂದರು.

ಹಿರಾ ಶುಗರ್ಸ್ ನಿರ್ದೇಶಕ ಸುರೇಶ ಬೆಲ್ಲದ, ರೆತ ಪಿಕೆಪಿಎಸ್ ಅಧ್ಯಕ್ಷ ಮಹಾಲಿಂಗ ಹಂಜಿ, ಚಿಕ್ಕೋಡಿ ಲೋಕೋಪಯೋಗಿ ಅಭಿಯಂತ ಶಾಂತಾರಾಮ ಎಂಟೆತ್ತಿನರ, ಈರಪ್ಪ ಕಾಕೋಳ, ಗುತ್ತಿಗೆದಾರ ಎಂ.ಎಸ್. ಬೆಣ್ಣಿಹಳ್ಳಿ, ಮಹಾದೇವ ಜಿವಣಿ, ಬಸಲಿಂಗ ಕಾಡೇಶಗೋಳ, ಸುನೀಲ ಇನಾಮದಾರ, ಜೆ.ಆರ್. ಪಾಟೀಲ, ಮಂಜು ಪಾಟೀಲ, ಶಿವಾ ಮಠಪತಿ, ಸಂಜು ಕಲ್ಯಾಣಕರ, ಮಲ್ಲಪ್ಪ ಕಾಮಗೌಡ, ಸುಕುಮಾರ ಕಾಮುಗೋಳ, ಬಾಳೇಶ ಕುಕನೂರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net