

ಬೆಳಗಾವಿ: ದಶಕಗಳಿಂದ ಆಮೆಗತಿಯಲ್ಲಿ ಸಾಗುತ್ತಿರುವ, ಸ್ಥಗಿತಗೊಂಡಿರುವ ನೀರಾವರಿ ಯೋಜನೆಗಳನ್ನು ಮುಗಿಸೋದು ಯಾವಾಗ?. ರಾಜ್ಯದಲ್ಲಿ ಸರ್ಕಾರ, ಶಾಸಕರು ಬದಲಾದರೂ ಯೋಜನೆಗಳು ಮಾತ್ರ ಪೂರ್ಣಗೊಳ್ಳುತ್ತಿಲ್ಲ ಏಕೆ? ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಜಿಪಂ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ನೀರಾವರಿ ಉತ್ತರ ವಲಯ ಬೆಳಗಾವಿ ಜಿಲ್ಲಾ ವ್ಯಾಪ್ತಿಯಡಿ ನೀರಾವರಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
ಟಪ್ರಭಾ, ಮಾರ್ಕಂಡೇಯ, ಬಳ್ಳಾರಿ ನಾಲಾ, ದೂಧಗಂಗಾ, ಚಚಡಿ, ಮುರಗೋಡ, ಗೊಡಚಿನಮಲ್ಕಿ, ರಾಮೇಶ್ವರ, ಕೆಂಪವಾಡ ಹೀಗೆ ವಿವಿಧ ನೀರಾವರಿ, ಕೆರೆ ತುಂಬಿಸುವ ಯೋಜನೆಗಳು ಅರಂಭಗೊಂಡು ವರ್ಷಗಳಾದರೂ ಪೂರ್ಣಗೊಂಡಿಲ್ಲ. ಒಂದು ನೀರಾವರಿ ಯೋಜನೆ ಅನುಷ್ಠಾನದಿಂದ ಸುತ್ತಲಿನ 200 ಕಿಮೀ ವರೆಗೆ ಪ್ರಯೋಜನ ಆಗುವಂತೆ ಯೋಜನೆ ರೂಪಿಸಬೇಕು. ಒಂದೇ ಪ್ರದೇಶ ಗುರಿಯಾಗಿಸಿಕೊಂಡು ಯೋಜನೆ ರೂಪಿಸಿದರೆ ಪ್ರಯೋಜನವಿಲ್ಲ. ಗಡುವು ನೀಡಿದ ಸಮಯದಲ್ಲೇ ಯೋಜನೆ ಪೂರ್ಣಗೊಳಿಸಬೇಕು. ಸರ್ಕಾರಗಳು ಬದಲಾದಂತೆ ಯೋಜನೆಗಳು ಬದಲಾಗಬಾರದು ಎಂದರು.
ಜಿಲ್ಲೆಯಲ್ಲಿ ಬಹುತೇಕ ನೀರಾವರಿ ಯೋಜನೆಗಳು ಪ್ರಗತಿಯಲ್ಲಿವೆ. ಕೆಲವು ಸ್ಥಗಿತಗೊಂಡಿದ್ದು, ಇವುಗಳನ್ನು ಪೂರ್ಣಗೊಳಿಸಬೇಕು. ಕೆಲ ಯೋಜನೆಗಳು 20 ವರ್ಷದಿಂದ ಪ್ರಸ್ತಾವನೆ ಹಂತದಲ್ಲಿವೆ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ನೀರಾವರಿ ನಿಗಮ ಉತ್ತರ ವಲಯದ ಮುಖ್ಯ ಇಂಜಿನಿಯರ್ ಬಿ.ಆರ್.ರಾಠೋಡ ಮಾತನಾಡಿ, ಮಾರ್ಕಂಡೇಯ, ಮಹಾಲಕ್ಷಿ$್ಮ, ಕರಗಾಂವ, ಸತ್ತಿಗೇರಿ ಏತ ನೀರಾವರಿ ಸೇರಿ ವಿವಿಧ ಯೋಜನೆಗಳು ಆಡಳಿತಾತ್ಮಕ ಅನುಮೋದನೆ, ಟೆಂಡರ್ ಹಂತದಲ್ಲಿವೆ. ವರ್ಷಾಂತ್ಯದೊಳಗೆ ಕಾಮಗಾರಿ ಆರಂಭಿಸಲಾಗುವುದು ಎಂದರು.
ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲಾ ಅವರು ಎಲ್ಲ ಶಾಸಕರ ಸಮಸ್ಯೆ ಆಲಿಸಲು ಎರಡು ಭಾರಿ ಆಗಮಿಸಲಿದ್ದಾರೆ. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಸರ್ಕಾರದ ಕೆಲಸದ ನಿಮಿತ್ತ ದೆಹಲಿಗೆ ಹೋಗುತ್ತಿದ್ದಾರೆ. ಇದಕ್ಕೆ ಬೇರೆ ಅರ್ಥ ಕಲ್ಪಿಸುವ ಅವಶ್ಯವಿಲ್ಲ. ಸತೀಶ ಜಾರಕಿಹೊಳಿ ಜಿಲ್ಲಾ ಉಸ್ತುವಾರಿ ಸಚಿವ