ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದ ಸಚಿವ ವೈದ್ಯ

Minister-Mankal-Vaidya-program
Published on

ಹೊನ್ನಾವರ: ಪಟ್ಟಣದ ಸಚಿವರ ಕಾರ್ಯಾಲಯದಲ್ಲಿ ಸೋಮವಾರ ಆಯೋಜಿಸಿದ ಜನಸ್ಪಂದನಾ ಕಾರ್ಯಕ್ರಮಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿದರು.

ನೆರೆಹಾವಳಿ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಮತ್ತು ನೆರೆಸಂತ್ರಸ್ತ ಫಲಾನುಭವಿಗಳಿಗೆ ಪರಿಹಾರ ವಿತರಣೆ ಕುರಿತು ಜನರು ಸಮಸ್ಯೆಗಳನ್ನು ಹೇಳಿಕೊಂಡರು. ಶಾಲೆಗಳಿಗೆ ಹಾನಿಯಾಗಿರುವ ಕುರಿತು ವಿವಿಧ ಭಾಗಗಳಿಂದ ಮನವಿ ಸಲ್ಲಿಸಲಾಯಿತು. ಶೈಕ್ಷಣಿಕ, ಆರೊಗ್ಯ ಸಮಸ್ಯೆ, ಗ್ರಾಮೀಣ ಭಾಗದ ಬಸ್ ಸಮಸ್ಯೆ ಸೇರಿದಂತೆ ವಿವಿಧ ಸಮಸ್ಯೆಗಳನ್ನು ಬಗೆಹರಿಸಲು ಜನರು ಆಗ್ರಹಿಸಿ ಮನವಿ ಸಲ್ಲಿಸಿದರು. ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿ ಅಧಿಕಾರಿಗಳಿಗೆ ಪೋನಾಯಿಸಿ ಸಮಸ್ಯೆ ಪರಿಹರಿಸಲು ಆದೇಶಿಸಿದರು.

ಕಡಲಕೊರೆತ ಸಮಸ್ಯೆ ನಿವಾರಿಸಲು ಮನವಿ:

ಕರ್ಕಿಯ ಸಮುದ್ರದ ಅಂಚಿನಲ್ಲಿರುವ ಗ್ರಾಮಗಳಾದ ಹೆಗಡೆಹಿತ್ಲ, ತೊಪ್ಪಲಕೇರಿ ಭಾಗದಲ್ಲಿ ಪ್ರತಿ ವರ್ಷ ಕಡಲಕೊರೆತದಿಂದ ಜನರಿಗೆ ತೊಂದರೆಯಾಗುತ್ತಿದೆ. ಈ ಸಮಸ್ಯೆ ನಿವಾರಿಸಲು ಕ್ರಮ ಕೈಗೊಳ್ಳಬೇಕು ಎಂದು ಕರ್ಕಿಯ ಹರಿಶ್ಚಂದ್ರ ನಾಯ್ಕ ನೇತೃತ್ವದಲ್ಲಿ ಸ್ಥಳಿಯರು ಮನವಿ ಮಾಡಿದರು. ಸ್ಥಳಿಯರಾದ ಸಣತಮ್ಮ ನಾಯ್ಕ, ಗಜಾನನ ನಾಯ್ಕ, ಶಂಕರ ನಾಯ್ಕ, ಮಾದೇವ ನಾಯ್ಕ, ನಾಗಪ್ಪ ನಾಯ್ಕ, ಕಮಲಾಕರ ಮಕ್ರಿ, ಸಮತಿ ನಾಯ್ಕ. ಸುನಿಲ್ ವರ್ಗಿಸ್ ಮೊಹನ ನಾಯ್ಕ ಇದ್ದರು. ಮನವಿ ಆಲಿಸಿದ ಸಚಿವರು, ಆದಷ್ಟು ಶೀಘ್ರದಲ್ಲಿ ಕರ್ಕಿಯ ಕಡಲಕೊರೆತ ಸಮಸ್ಯೆ ನಿವಾರಿಸಲು ಕ್ರಮ ಕೈಗೊಳ್ಳುತ್ತೇನೆ ಎಂದು ಭರವಸೆ ನಿಡಿದರು.

`ಶರಾವತಿ ನದಿಯ ನೀರು ಬೆಂಗಳೂರಿಗೆ ಕೊಂಡೊಯ್ಯಲು ಸರ್ಕಾರ ರೂಪಿಸಿರುವ ಯೋಜನೆಯ ಬಗ್ಗೆ ಸ್ಪಷ್ಟ ಮಾಹಿತಿ ದೊರೆತಿಲ್ಲ. ಪ್ರತಿದಿನ ವಿದ್ಯುತ್ ಉತ್ಪಾದನೆಯಾಗಿ ಜಲಾಶಯದಿಂದ ಎಷ್ಟು ನೀರು ಸಮುದ್ರಕ್ಕೆ ಸೇರುತ್ತದೆ ಮತ್ತು ಬೆಂಗಳೂರಿಗೆ ಎಷ್ಟು ಪ್ರಮಾಣದ ನೀರಿನ ಅವಶ್ಯಕತೆ ಇದೆ ಎನ್ನುವ ಮಾಹಿತಿಯನ್ನು ಸಹ ಪಡೆಯುತ್ತೇನೆ. ಯೋಜನೆಯ ಸಾಧಕ-ಭಾದಕದ ಬಗ್ಗೆ ಸಮಗ್ರವಾಗಿ ಮಾಹಿತಿ ಪಡೆದೆ ನಿರ್ಧರಿಸಲಾಗುತ್ತದೆ. 'ಮಂಕಾಳ ವೈದ್ಯ, ಉಸ್ತುವಾರಿ ಸಚಿವ https://www.vijayavani.net/sirsi-hubballi-road-problem-vehicles-bike-rider-problem https://www.vijayavani.net/sirsi-hubballi-road-problem-vehicles-bike-rider-problem

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net