ಮಿರ್ಜಿಗೆ ಸಚಿವ ತಿಮ್ಮಾಪೂರ ಭೇಟಿ

Minister Thimmapur visits Mirziyoyev
Minister Thimmapur visits Mirziyoyev
Published on

ಮುಧೋಳ: ತಾಲೂಕಿನ ಮಿರ್ಜಿ ಗ್ರಾಮದ ಬ್ಯಾರೇಜ್‌ಗೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ಭೇಟಿ ನೀಡಿ ನದಿ ನೀರಿನ ಪ್ರಮಾಣ ವೀಕ್ಷಣೆ ಮಾಡಿದರು.

ಭಾರಿ ಪ್ರಮಾಣದಲ್ಲಿ ಪ್ರವಾಹ ಬಂದು ಹಾನಿಯಾಗಿದ್ದ 2019ರ ಪ್ರವಾಹ ಪೀಡಿತ ಸ್ಥಳಕ್ಕೆ ಸಚಿವರು ಭೇಟಿ ನೀಡಿದರು.

ಮಹಾರಾಷ್ಟ್ರ ಹಾಗೂ ಬೆಳಗಾವಿ ಜಿಲ್ಲೆಯಲ್ಲಿ ಮಳೆ ಮುಂದುವರಿದ ಪರಿಣಾಮ ಘಟಪ್ರಭಾ ನದಿಗೆ ಅಪಾರ ನೀರು ಹರಿದು ಬರುತ್ತಿದೆ. ಮುಂದೆ ಹೆಚ್ಚಿನ ಪ್ರಮಾಣದಲ್ಲಿ ಪ್ರವಾಹ ಬಂದರೆ ಮುನ್ನೆಚ್ಚರಿಕೆ ವಹಿಸಬೇಕು. ನದಿ ಪಾತ್ರದ ಗ್ರಾಮಸ್ಥರಿಗೆ ಯಾವುದೇ ತೊಂದರೆ ಉಂಟಾಗದಂತೆ ಅಗತ್ಯ ಮುಂಜಾಗ್ರತೆ ಕ್ರಮಗಳನ್ನು ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಜಾನಕಿ ಕೆ.ಎಂ., ಜಿಪಂ ಸಿಇಒ ಶಶಿಧರ ಕುರೇರ, ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ, ತಹಸೀಲ್ದಾರ್ ಮಹದೇವ ಸನಮುರಿ, ತಾಪಂ ಇಒ ಉಮೇಶ ಸಿದ್ನಾಳ, ವಿವಿಧ ಇಲಾಖೆಗಳ ಅಧಿಕಾರಿಗಳು, ಬಸನಗೌಡ ಪಾಟೀಲ, ಶ್ರೀಕಾಂತಗೌಡ ಪಾಟೀಲ, ಹುಬ್ಬಳೆಪ್ಪ ಉಪ್ಪಾರ, ಭೀಮಸಿ ಯಳ್ಳಾಮಾಸಿ, ಸಂಗಪ್ಪ ಇಮ್ಮನವರ, ಹಣಮಂತ ಕಣಬೂರ, ಹನುಮಂತ ತೇಲಿ, ರಮೇಶ ಕಾಡರಕೊಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net