

ಹೊಸಪೇಟೆ
ಟ್ರಕ್ ಓಡಿಸುವವರಿಗೆ ಬಹುತೇಕ ಕಡೆ ಮೂಲಭೂತ ಸೌಕರ್ಯಗಳು ಇರುವುದಿಲ್ಲ. ಅವರ ಬೇಡಿಕೆಗೆ ಅನುಗುಣವಾಗಿ, ಟ್ರಕ್ ಡ್ರೈವರ್ ಹಾಗೂ ಕ್ಲೀನರ್‌ಗಳ ಅನುಕೂಲಕ್ಕಾಗಿ ರಾಜ್ಯದ ಹಲವು ಕಡೆ ಟ್ರಾಕ್ಟರ್ ಮಿನಲ್ ನಿರ್ಮಾಣ ಮಾಡಲಾಗುತ್ತಿದೆ ಎಂದು ಸಾರಿಗೆ ಮತ್ತು ಮುಜರಾಯಿ ಇಲಾಖೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದರು.
ನಗರದ ಹೊರವಲಯದ ರಾಜ್ಯ ಹೆದ್ದಾರಿ 50ರಲ್ಲಿ ನಿರ್ಮಾಣವಾಗುತ್ತಿರುವ ದಿ.ದೇವರಾಜು ಅರಸು ಟ್ರಕ್ ಟರ್ಮಿನಲ್ ಕಾಮಗಾರಿ ವೀಕ್ಷಣೆಗೆ ಆಗಮಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು.
35 ಕೋಟಿ ರೂ ವೆಚ್ಚದಲ್ಲಿ 15.39 ಹೆಕ್ಟೇರ್‌ನಲ್ಲಿ 294 ವಾಹನಗಳು ನಿಲ್ಲಲಿಕ್ಕೆ ಟ್ರಕ್ ಟರ್ಮಿನಲ್ ನಿರ್ಮಾಣ ಆಗುತ್ತಿದೆ. ಮೂರು ತಿಂಗಳಲ್ಲಿ ಉದ್ಘಾಟನೆ ಆಗಲಿದೆ. ಇದರಲ್ಲಿ ಡ್ರೈವರ್ ಹಾಗೂ ಕ್ಲೀನರ್‌ಗಳಿಗೆ 38 ರೂಮ್‌ಗಳ ವ್ಯವಸ್ಥೆ, ಟ್ರಾನ್ಸ್ಪೋರ್ಟ್ ಕಚೇರಿ ಸೇರಿದಂತೆ ಇತರೆ ಮೂಲಭೂತ ಸೌಕರ್ಯ ಒದಗಿಸಲಾಗುತ್ತದೆ. ಇನಷ್ಟು ಹುಡಾ ಭಾಗವನ್ನು ಕೊಡಲು ಇಲ್ಲಿನ ಜಿಲ್ಲಾಧಿಕಾರಿ ಹಾಗೂ ಹುಡ ಅಧ್ಯಕ್ಷರಿಗೂ ಕೇಳಿದ್ದೆವೆ. ಇದು ಕಲ್ಯಾಣ ಕರ್ನಾಟಕಕ್ಕೆ ಬರುವುದರಿಂದ ಕೆ.ಕೆ.ಆರ್.ಡಿಬಿಯಿಂದ ಸ್ವಲ್ಪ ಅನುದಾನ ನೀಡಲು ಸಚಿವ ಸುಧಾಕರ್ ಅವರಿಗೆ ಶಾಸಕ ಎಚ್.ಆರ್.ಗವಿಯಪ್ಪ ಕೇಳಿದ್ದಾರೆ. ನಾನು ಕೂಡ ಕೇಳುವೆ. ರಾಜ್ಯದಲ್ಲಿ ಚಾಲಕರ ಅವರ ಬೇಡಿಕೆಗಳ ಅನುಗುಣವಾಗಿ ರಾಜ್ಯದಲ್ಲಿ ಹಲವು ಕೂಡ ಟ್ರಕ್ ಟರ್ಮಿನಲ್ ನಿರ್ಮಾಣ ಮಾಡುವ ಪ್ರಯತ್ನ ನಡೆಯುತ್ತಿದೆ. ಮೈಸೂರಿನಲ್ಲಿ ಕೂಡ ಆರು ಹೆಕ್ಟೇರ್ ಜಮೀನಿನಲ್ಲಿ ಟರ್ಮಿನಲ್ ಮಾಡಲು ವ್ಯವಸ್ಥೆ ಮಾಡಲಾಗಿದೆ ಎಂದರು.