ಸಚಿವ ಸುರೇಶ್​ ಕುಮಾರ್ ಅವರ ಬೇಸರ ನೀಗಿಸಿದ ಆ ಎರಡು ಪೀಳಿಗೆ...

Suresh
Published on

ಬೆಂಗಳೂರು: ಕರೊನಾ ಸೋಂಕಿನ ಹಿನ್ನೆಲೆಯಲ್ಲಿ ಕ್ವಾರಂಟೈನ್​ಗೆ ಒಳಗಾಗಿರುವ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್​.ಸುರೇಶ್​ ಕುಮಾರ್​ ಅವರಿಗೆ ಇಂದು ಮತ್ತೊಂದು ಬೇಸರವೂ ಕಾಡಿದೆ. ಆದರೆ ಅದನ್ನು ಆ ಎರಡು ಪೀಳಿಗೆ ನೀಗಿಸಿದೆ!

ಕೋವಿಡ್​-19 ಧೃಢ ಪಟ್ಟಿರುವ ಹಿನ್ನೆಲೆಯಲ್ಲಿ ವೈದ್ಯರ ಸಲಹೆ ಮೇರೆಗೆ ನಾನು ಇನ್ನು ಕೆಲವು ದಿನಗಳ ಕಾಲ ಹೋಂ ಕ್ವಾರಂಟೈನ್​ನಲ್ಲಿ ಇರುತ್ತೇನೆ. ಯಾವುದೇ ಲಕ್ಷಣ ಇಲ್ಲದಿರುವುದರಿಂದ ಯಾವ ಆತಂಕವೂ ಇಲ್ಲ ಎಂದು ಸೋಷಿಯಲ್ ಮೀಡಿಯಾದಲ್ಲಿ ಹೇಳಿಕೊಂಡು ಕ್ವಾರಂಟೈನ್​ಗೆ ಒಳಗಾದ ಕೆಲವೇ ನಿಮಿಷಗಳಲ್ಲಿ ಅವರು ಇನ್ನೊಂದು ವಿಷಯ ಹೇಳಿಕೊಂಡಿದ್ದಾರೆ.

ಅದೇನೆಂದರೆ ಇಂದು ಅವರ ತಾಯಿಯವರ ಜನ್ಮದಿನ. ನೇರವಾಗಿ ತಾಯಿಯ ಹತ್ತಿರ ಹೋಗಿ ಶುಭ ಕೋರಲು ಆಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿರುವ ಅವರು, ಇನ್ನೊಂದು ರೀತಿಯಲ್ಲಿ ತಮಗೆ ತಾವೇ ಸಮಾಧಾನ ಹೇಳಿಕೊಂಡಿದ್ದಾರೆ. ತಾಯಿಗೆ ತಮ್ಮ ಪುತ್ರಿ ದಿಶಾ ಹಾಗೂ ಮೊಮ್ಮಗು ಜನ್ಮದಿನದ ಶುಭ ಹಾರೈಸಿದ್ದ ಫೋಟೋ ಹಂಚಿಕೊಂಡಿರುವ ಅವರು, ತಮಗೆ ಶುಭ ಕೋರಲು ಆಗದಿದ್ದರೂ ಚಿಂತೆ ಇಲ್ಲ, ಎರಡು ಪೀಳಿಗೆಗಳು ಶುಭ ಕೋರಿವೆ ಎಂದು ಸಚಿವರು ಬೇಸರದಲ್ಲೂ ಖುಷಿಯನ್ನು ಕಂಡುಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net