

ಬೆಂಗಳೂರು: ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಅವರಿಗೆ ಆಘಾತದ ಮೇಲೆ ಆಘಾತ ಒದಗಿಬರುತ್ತಿದೆ. ಅವರ ಮನೆಯ ಅಡುಗೆ ಕೆಲಸದ ವ್ಯಕ್ತಿಗೆ ಕರೊನಾ ದೃಢಪಟ್ಟ ಹಿನ್ನೆಲೆಯಲ್ಲಿ ಸಚಿವರ ಇಡೀ ಕುಟುಂಬ ಕರೊನಾ ಪರೀಕ್ಷೆಗೆ ಸೋಮವಾರ ಒಳಗಾಗಿತ್ತು.
ಅದರಲ್ಲಿ ಸುಧಾಕರ್ ಅವರ ತಂದೆ ಪಿ.ಎನ್. ಕೇಶವರೆಡ್ಡಿ ಅವರಿಗೆ ಕರೊನಾ ಪಾಸಿಟಿವ್ ಇರುವುದು ದೃಢಪಟ್ಟಿದೆ. ‘‘ಕುಟುಂಬದ ಇತರ ಸದಸ್ಯರ ವರದಿಗಾಗಿ ಕಾಯುತ್ತಿದ್ದೇನೆ. ನಮಗೆ ನಿಮ್ಮೆಲ್ಲರ ಶುಭ ಹಾರೈಕೆ ಇರಲಿ’’ ಎಂದು ಸುಧಾಕರ್ ಟ್ವಿಟರ್‌ನಲ್ಲಿ ಕೋರಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯ್ತಿಯ ಹಾಲಿ ಸದಸ್ಯರಾಗಿರುವ 82 ವರ್ಷ ವಯಸ್ಸಿನ ಕೇಶವರೆಡ್ಡಿ ಅವರು ಕೆಮ್ಮು, ನೆಗಡಿ, ಜ್ವರದಿಂದ ಬಳಲುತ್ತಿದ್ದಾರೆ ಎಂದು ಸುಧಾಕರ್ ಮಧ್ಯಾಹ್ನವಷ್ಟೇ ತಿಳಿಸಿದ್ದರು. ಈಗ ಅವರ ಕುಟುಂಬದ ಇತರ ಸದಸ್ಯರ ಆರೋಗ್ಯ ಪರೀಕ್ಷೆಯ ವರದಿಗಾಗಿ ಕಾಯಲಾಗುತ್ತಿದೆ.