ಸುರತ್ಕಲ್ ಬೀಚ್ ಕೊಂಡಾಡಿದ ಸೋನೊವಾಲ್

webbb
Published on

ಮಂಗಳೂರು: ಕೇಂದ್ರ ಬಂದರು, ನೌಕಾಯಾನ ಹಾಗೂ ಜಲಮಾರ್ಗಗಳ ಇಲಾಖೆ ಸಚಿವ ಸರ್ಬಾನಂದ ಸೋನೊವಾಲ್ ತಮ್ಮ ಜಿಲ್ಲಾ ಪ್ರವಾಸದ ಎರಡನೇ ದಿನ ಸುರತ್ಕಲ್ ಬೀಚ್‌ಗೆ ಭೇಟಿ ನೀಡಿ ಅದರ ಸೌಂದರ್ಯದ ಬಗ್ಗೆ ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಸುರತ್ಕಲ್ ಲೈಟ್‌ಹೌಸ್ ವೀಕ್ಷಿಸಿದ್ದೇನೆ, ಅಲ್ಲಿಂದ ಸಿಗುವ ಕಡಲತೀರದ ಚೆಲುವು ನೋಡಿ ಮಂತ್ರಮುಗ್ಧನಾಗಿದ್ದೇನೆ. ಭಾರತದ ಲೈಟ್‌ಹೌಸ್‌ಗಳಿಗೆ ಪ್ರವಾಸಿಗರನ್ನು ಆಕರ್ಷಿಸುವ ಸಾಕಷ್ಟು ಅವಕಾಶಗಳಿವೆ. ಹಾಗೂ ಹೆಚ್ಚೆಚ್ಚು ಪ್ರವಾಸಿಗರನ್ನು ಆಕರ್ಷಿಸುವ ನಿಟ್ಟಿನಲ್ಲಿ ನಾವು ಕ್ರಮ ಕೈಗೊಳ್ಳಲಿದ್ದೇವೆ ಎಂದು ತಿಳಿಸಿದ್ದಾರೆ. ಅವರ ಟ್ವೀಟ್‌ಗೆ ಕೆಲವರು ಪ್ರತಿಕ್ರಿಯಿಸಿದ್ದು, ಸುರತ್ಕಲ್ ಬೀಚ್ ಅಭಿವೃದ್ಧಿಪಡಿಸಲು ಸಾಕಷ್ಟು ಅವಕಾಶವಿದ್ದರೂ ಇನ್ನೂ ಆಗಿಲ್ಲ, ನೀವಾದರೂ ಸೂಕ್ತ ಕ್ರಮಕ್ಕೆ ಮುಂದಾಗಿ ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net