

ತುಮಕೂರು: ನಾವು ಎಸ್ (ಸೋಮಶೇಖರ್ ) ಬಿ (ಬೈರತಿ ಬಸವರಾಜ್) ಎಂ (ಮುನಿರತ್ನ) ಒಂದಾಗಿದ್ದೇವೆ. ಹಿಂದೆ ಹೇಗೆ ಎಸ್ಬಿಎಂ ಆಗಿದ್ದೆವೋ ಈಗಲೂ ಹಾಗೆಯೇ ಎಸ್ಬಿಎಂ ಆಗಿಯೇ ಇರುತ್ತೇವೆ. ಮುಂದುವರಿಯುತ್ತೇವೆ. ನಮ್ಮೊಳಗೆ ಭಿನ್ನಾಭಿಪ್ರಾಯ ಇಲ್ಲ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದ್ದಾರೆ.
ಅವರು ಸೋಮವಾರ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದುಕೊಂಡರು. ಬಳಿಕ ಸುದ್ದಿಗಾರರ ಜತೆಗೆ ಮಾತನಾಡಿದ್ದು, ಮುನಿರತ್ನ ಮತ್ತು ನಮ್ಮ ನಡುವೆ ಯಾವುದೇ ಅಂತರ ಇಲ್ಲ. ಸಚಿವಸ್ಥಾನ ಕೊಡೋದು ಮುಖ್ಯಮಂತ್ರಿಗಳ ಪರಮಾಧಿಕಾರವಾಗಿದ್ದು ಅವರು ವಿವೇಚನಾಯುತವಾಗಿ ಅದನ್ನು ನಿರ್ವಹಿಸುವ ವಿಶ್ವಾಸವಿದೆ.
ಸ್ಥಿರ ಸರ್ಕಾರಕ್ಕೋಸ್ಕರ ಈ ಹಿಂದೆ ಹಿಂದೆ ನಾವಿಬ್ಬರು ಚುನಾವಣೆಗೆ ನಿಂತಿದ್ವಿ ಅದಕ್ಕೆ ಎಸ್ ಬಿ ಅಂದ್ರು. ಈಗ ಮುನಿರತ್ನ ಬಂದಿದ್ದಾರೆ ಪುನಃ ಎಸ್ ಬಿ ಎಮ್ ಆಗಿದ್ದೇವೆ. ಮುಖ್ಯಮಂತ್ರಿಗಳು ನುಡಿದಂತೆ ನಡೆದಿದ್ದಾರೆ. ಸಚಿವ ಸಂಪುಟ ವಿಸ್ತರಣೆಯೋ ಪುನಾರಚನೆಯೋ ಗೊತ್ತಿಲ್ಲ. ಈಗತಾನೆ ಬಿಜೆಪಿಗೆ ಎಂಟ್ರಿ ಆಗಿದ್ದೇವೆ ಅದೆಲ್ಲಾ ಹೇಳ್ತಾರಾ..? ಎಂದು ಸೋಮಶೇಖರ್ ಸುದ್ದಿಗಾರರಿಗೇ ಮರುಪ್ರಶ್ನೆ ಹಾಕಿದರು. (ದಿಗ್ವಿಜಯ ನ್ಯೂಸ್)