

ತುಮಕೂರು: ರಾಷ್ಟ್ರಪತಿ ದ್ರೌಪದಿಮುರ್ಮ ಅವರನ್ನು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಭೇಟಿ ಮಾಡಿ ಸಿದ್ದಗಂಗಾ ಮಠದ ಲಿಂಗೈಕ್ಯ ಡಾ.ಶ್ರೀ ಶಿವಕುಮಾರ ಮಹಾಶಿವಯೋಗಿಗಳ 118ನೇ ಜನದಿನೋತ್ಸವ ಅಂಗವಾಗಿ ಆಚರಿಸುವ ಗುರುವಂದನಾ ಮಹೋತ್ಸವಕ್ಕೆ ಆಹ್ವಾನಿಸಿದರು.
ಗುರುವಾರ ರಾಷ್ಟ್ರಪತಿಭವನದಲ್ಲಿ ದ್ರೌಪದಿಮುರ್ಮರನ್ನು ಭೇಟಿ ಮಾಡಿದ ಸಚಿವ ವಿ.ಸೋಮಣ್ಣ ಅವರು ಶ್ರೀಮಠದ ಪರಂಪರೆ ಹಾಗೂ ಪೂಜ್ಯ ಸಿದ್ದಗಂಗಾ ಶ್ರೀಗಳ ತ್ರಿವಿಧ ದಾಸೋಹದ ಸೇವೆ, ಸಾಧನೆ ಬಗ್ಗೆ ಮಾಹಿತಿ ನೀಡಿದರು. ಪೂಜ್ಯ ಶಿವಕುಮಾರ ಶ್ರೀಗಳ ಬಗ್ಗೆ ಅಪಾರ ಗೌರವ ತೋರಿದ ರಾಷ್ಟ್ರಪತಿಗಳು ಆಹ್ವಾನವನ್ನು ಅತ್ಯಂತ ಭಕ್ತಿಭಾವದಿಂದ ಸ್ವೀಕರಿಸಿದ್ದಾರೆ. ಕಾರ್ಯಕ್ರಮದಲ್ಲಿ ಭಾಗವಹಿಸುವ ಕುರಿತು ರಾಷ್ಟ್ರಪತಿ ಭವನದಿಂದ ಸೂಕ್ತ ದಿನಾಂಕದ ಮಾಹಿತಿಯನ್ನು ಶ್ರೀಮಠಕ್ಕೆ ಕಳುಹಿಸಿಕೊಡಲಿದ್ದಾರೆ.