ವಸತಿ ಇಲಾಖೆಯಲ್ಲಿ ಭ್ರಷ್ಟಾಚಾರ ತಡೆಗೆ ಆ್ಯಪ್ ತಂದಿದ್ದೇವೆ ಎಂದ ಸಚಿವ ಸೋಮಣ್ಣ!

somana
Published on

ಸುಬ್ರಹ್ಮಣ್ಯ: ಭ್ರಷ್ಟಾಚಾರ ತಡೆಯಲು ಇಲಾಖೆಗೆ ಪ್ರತ್ಯೇಕ ಆ್ಯಪ್ ಮಾಡಲಾಗಿದೆ. ಇದೇ ರೀತಿ ಹೊಸ ಸಾಫ್ಟ್‌ವೇರ್ ಸಿದ್ಧಪಡಿಸಿ ಜನಸಾಮಾನ್ಯರು ಮತ್ತು ಬಡವರಿಗೆ ಸರ್ಕಾರದ ಯೋಜನೆಗಳು ಪಾರದರ್ಶಕವಾಗಿ ಸಿಗುವಂತೆ ಮಾಡಲಾಗಿದೆ ಎಂದು ವಸತಿ ಮತ್ತು ಮೂಲ ಸೌಕರ್ಯ ಸಚಿವ ವಿ.ಸೋಮಣ್ಣ ಹೇಳಿದರು.

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಶನಿವಾರ ಭೇಟಿ ನೀಡಿ ದೇವರ ದರ್ಶನ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ರಾಜ್ಯದಲ್ಲ್ಲಿ ವಸತಿ ಯೋಜನೆಯ ವ್ಯವಸ್ಥೆಗೆ ಒಂದೇ ವಿಷನ್ ಜಾರಿಗೆ ತರಲಾಗಿದೆ. ಹಿಂದಿನ ಸರ್ಕಾರದ ಲೋಪಗಳನ್ನು ಸರಿಪಡಿಸಿ ಅರ್ಹ ಫಲಾನುಭವಿಗಳನ್ನೇ ಗುರುತಿಸಿ ಅವರ ಖಾತೆಗೆ ನೇರವಾಗಿ ಹಣ ಸಂದಾಯ ಮಾಡುವ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಬಸವರಾಜ ಬೊಮ್ಮಾಯಿ ಸಿಎಂ ಆದ ಬಳಿಕ ಗ್ರಾಮೀಣ ಪ್ರದೇಶಕ್ಕೆ 5 ಲಕ್ಷ ಹಾಗೂ ನಗರ ಪ್ರದೇಶಕ್ಕೆ 1 ಲಕ್ಷ ಮನೆಗಳನ್ನು ನೀಡಿದ್ದಾರೆ. ಈ ಪೈಕಿ 2.34 ಲಕ್ಷ ಮನೆಗಳ ನಿರ್ಮಾಣ ಆರಂಭವಾಗಿದೆ. ಹಿಂದಿನ ಸರ್ಕಾರದ ಅವಧಿಯಲ್ಲಿ ಬಾಕಿ ಉಳಿದಿದ್ದ 10 ಲಕ್ಷ ಮನೆಗಳಲ್ಲಿ ಈಗಾಗಲೇ 6 ಲಕ್ಷ ಮನೆಗಳ ನಿರ್ಮಾಣ ಪೂರ್ಣಗೊಂಡಿದೆ. ಉಳಿದವುಗಳನ್ನು ಶೀಘ್ರ ಪೂರ್ಣಗೊಳಿಸಿ 2023ರ ಮಾರ್ಚ್ 9 ರೊಳಗೆ 16 ಲಕ್ಷ ಮನೆಗಳನ್ನು ಫಲಾನುಭವಿಗಳಿಗೆ ನೀಡಲಾಗುವುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net