ಬಂಜಾರರಿಂದ ಕಾಯಕ ತತ್ವ ಪಾಲನೆ

Minister Sivananda Patil, Gajanan Temple, Basavanbagewadi, Banjara,
ಬಸವನಬಾಗೇವಾಡಿ ತಾಲೂಕಿನ ಉಕ್ಕಲಿ ತಾಂಡಾದಲ್ಲಿ ಗಜಾನನ ದೇವಾಲಯ ಉದ್ಘಾಟನಾ ಸಮಾರಂಭಕ್ಕೆ ಗಣ್ಯರು ಚಾಲನೆ ನೀಡಿದರು. ಸಚಿವ ಶಿವಾನಂದ ಪಾಟೀಲ, ಸಂಗನಬಸವ ಶಿವಾಚಾರ್ಯರು, ಉಮೇಶ ಕೌಲಗಿ, ಅಣ್ಣಾಸಾಹೇಬಗೌಡ ಪಾಟೀಲ ಇತರರಿದ್ದರು.
Published on

ಬಸವನಬಾಗೇವಾಡಿ: ಅಣ್ಣಬಸವಣ್ಣನವರು 12 ನೇ ಶತಮಾನದಲ್ಲಿ ಸಮಾಜಕ್ಕೆ ಕಾಯಕ ದಾಸೋಹ ಪರಿಕಲ್ಪನೆ ನೀಡಿದರು. ಅಣ್ಣನ ತತ್ವಗಳನ್ನು ಚಾಚೂ ತಪ್ಪದೆ ಬಂಜಾರ ಸಮಾಜ ಆಚರಿಸಿಕೊಂಡು ಬರುತ್ತಿರುವುದು ಸ್ಮರಣೀಯ ಎಂದು ಕಬ್ಬು ಅಭಿವೃದ್ಧಿ, ಸಕ್ಕರೆ, ಜವಳಿ, ಕೃಷಿ ಉತ್ಪನ್ನ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಹೇಳಿದರು.

ತಾಲೂಕಿನ ಉಕ್ಕಲಿ ತಾಂಡಾದಲ್ಲಿ ಗಜಾನನ ದೇವಾಲಯ ಉದ್ಘಾಟನೆ ಹಾಗೂ ಮೂರ್ತಿ ಪ್ರತಿಷ್ಠಾಪನೆ ಸಮಾರಂಭದಲ್ಲಿ ಅವರು ಮಾತನಾಡಿದರು.

ವರ್ಷವಿಡಿ ಶ್ರಮ ಪಟ್ಟು ದುಡಿಯುವ ಬಂಜಾರ ಸಮಾಜದವರು ದೀಪಾವಳಿ, ದಸರಾ ಹಬ್ಬಗಳನ್ನು ಶ್ರದ್ಧಾ- ಭಕ್ತಿಯಿಂದ ಸಂಭ್ರಮದಿಂದ ಆಚರಣೆ ಮಾಡುವ ಜೊತೆಗೆ ಹಂಚಿ ತಿನ್ನುವ ಗುಣ ಉಳ್ಳವರಾಗಿದ್ದಾರೆ ಎಂದು ಹೇಳಿದರು.

ದೇವರ ಕಾರ್ಯಗಳನ್ನು ಶ್ರದ್ದಾ ಭಕ್ತಿಯಿಂದ ನೆರವೆೀರಿಸುವ ಬಂಜಾರ ಸಮಾಜದವರು ಶ್ರಮ ಜೀವಿಗಳಾಗಿದ್ದಾರೆ. ಮನುಷ್ಯ ಜೀವನದಲ್ಲಿ ಶ್ರದ್ಧೆಯಿಂದ ಜೀವನ ನಡೆಸಲು ದೇವಸ್ಥಾನಗಳು ಅತ್ಯವಶ್ಯವಾಗಿವೆ ಎಂದು ಹೇಳಿದರು.

ಮನಗೂಳಿಯ ಸಂಗನಬಸವ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಪ್ರತಿಯೊಬ್ಬರ ಮಾನಸಿಕ ನೆಮ್ಮದಿಗೆ ದೇವಸ್ಥಾನಗಳು ಸಹಕಾರಿಯಾಗಿವೆ. ಉಕ್ಕಲಿ ತಾಂಡಾದಲ್ಲಿ ಗಜಾನನ ದೇವಸ್ಥಾನ ನಿರ್ಮಿಸಿರುವುದು ವಿಶೇಷವಾಗಿದೆ ಎಂದು ಹೇಳಿದರು.

ಆದರ್ಶ ಶಿಕ್ಷಕರ ವೇದಿಕೆಯ ಜಿಲ್ಲಾಧ್ಯಕ್ಷ ಉಮೇಶ ಕೌಲಗಿ, ಪಿಕೆಪಿಎಸ್ ಅಧ್ಯಕ್ಷ ಅಣ್ಣಾಸಾಹೇಬಗೌಡ ಪಾಟೀಲ, ಗ್ರಾಪಂ ಅಧ್ಯಕ್ಷ ಧರೆಪ್ಪ ಮಸಳಿ, ಕರವೇ ಜಿಲ್ಲಾ ಯುವ ಘಟಕ ಅಧ್ಯಕ್ಷ ಅಶೋಕ ಹಾರಿವಾಳ, ಕಾಂಗ್ರೆಸ್ ಮುಖಂಡ ರಾಹುಲ್ ಕುಬಕಡ್ಡಿ, ಶಿವಾನಂದ ಮಂಗಾನ್ನವರ, ಬಸವರಾಜ ಸೋಮಪುರ, ಸುಭಾಸ ಕಲ್ಯಾಣಿ, ನಾಗರಾಜ ಗುಂದಗಿ, ರವಿ ರಾಠೋಡ, ನಾತುಶಂಕರ ರಾಠೋಡ, ಮೋತಿಲಾಲ ರಾಠೋಡ, ಯಂಕು ರಾಠೋಡ, ಪಾಂಡು ರಾಠೋಡ, ದೊಂಡು ರಾಠೋಡ, ತೇಜು ರಾಠೋಡ ಇತರರಿದ್ದರು. ಶಿವಾನಂದ ಮಡಿಕೇಶ್ವರ ನಿರೂಪಿಸಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net